alex Certify ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸುವುದು ಕೂಡ ಕಡ್ಡಾಯ. ಒಂದು ವೇಳೆ ಈವರೆಗೂ ಮೊಬೈಲ್ ಸಂಖ್ಯೆ ಆಧಾರ್ ಜೊತೆ ಲಿಂಕ್ ಆಗದೆ ಹೋದಲ್ಲಿ ಅಥವಾ ಹೊಸ ನಂಬರ್ ಸೇರಿಸಲು ಬಯಸುವವರು ಸುಲಭವಾಗಿ ನಂಬರ್ ಲಿಂಕ್ ಮಾಡಬಹುದು.

ನೀವು ಮೊದಲು ಯುಐಡಿಎಐ ವೆಬ್‌ಸೈಟ್‌ಗೆ ಹೋಗಬೇಕು https://ask.uidai.gov.in/.ನಿಮ್ಮ  ಫೋನ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಿಮ್ಮ ಮುಂದೆ ತೆರೆದ ಪುಟದಲ್ಲಿ ಭರ್ತಿ ಮಾಡಬೇಕು. ಇದರ ನಂತರ, ನಿಮ್ಮ ಫೋನ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಭರ್ತಿ ಮಾಡಿ ಮುಂದುವರೆಸಿ ಬಟನ್ ಕ್ಲಿಕ್ ಮಾಡಬೇಕು. ತೆರೆದ ಹೊಸ ಪುಟದಲ್ಲಿ ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸಬೇಕಾ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತ್ರ ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ. ಇಲ್ಲಿ ನೀವು ಹೆಸರು, ಆಧಾರ್ ಕಾರ್ಡ್, ವಿಳಾಸದ ಆಯ್ಕೆಗಳನ್ನು ಕಾಣಬಹುದು. ಅಲ್ಲಿ what do you want to update ಎಂಬ ಆಯ್ಕೆ ಕಾಣುತ್ತದೆ. ಅಲ್ಲಿ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೊಬೈಲ್ ನಂಬರ್ ತೆರೆದುಕೊಳ್ಳುತ್ತದೆ. ಅಲ್ಲಿ ಲಿಂಕ್ ಮಾಡುವ ಮೊಬೈಲ್ ನಂಬರ್ ಹಾಕಬೇಕು.  ನಂತ್ರ ನಿಮ್ಮ ನಂಬರ್ ಗೆ ಬರುವ ಒಟಿಪಿ ಹಾಕಿ, ಸೇವ್ ಮತ್ತು ಪ್ರೊಸೀಡ್ ಕ್ಲಿಕ್ ಮಾಡಿ. ಸಬ್ಮಿಟ್ ಮಾಡುವ ಮೊದಲು ಒಂದು ಅಪ್ಲಿಕೇಷನ್ ನಿಮ್ಮ ಮುಂದೆ ಬರುತ್ತದೆ. ಅದನ್ನು ಎರಡು ಬಾರಿ ಪರಿಶೀಲಿಸಿ ನಂತ್ರ ಓಕೆ ನೀಡಿ. ನಂತ್ರ Book Appointment ಕ್ಲಿಕ್ ಮಾಡಿ. ಮುಂದಿನ ಹಂತಕ್ಕೆ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಅಲ್ಲಿ 50 ರೂಪಾಯಿ ಶುಲ್ಕದ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ನಂತ್ರ ನಿಮ್ಮ ನಂಬರ್ ಅಪ್ಡೇಟ್ ಮಾಡ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...