
ಆಧಾರ್ ನವೀಕರಣ ಬಹಳ ಮುಖ್ಯ. ಭಾರತೀಯ ನಾಗರಿಕರಿಗೆ ವಿಶ್ವಾಸಾರ್ಹ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಯಾಗಿ ಆಧಾರ್ ಮಹತ್ವ ಪಡೆದಿದೆ.
ಆಧಾರ್ ಕೇಂದ್ರಕ್ಕೆ ಹೋಗಿ ಅಥವಾ ಆನ್ಲೈನ್ ಮೂಲಕ ಆಧಾರ್ ನವೀಕರಿಸಬಹುದು. ಬಯೋಮೆಟ್ರಿಕ್ಸ್ ಅಪ್‌ಡೇಟ್ ಸೇರಿದಂತೆ ಈಗ ಒಂದು ಅಥವಾ ಹೆಚ್ಚಿನ ಅಪ್‌ಡೇಟ್‌ಗಳಿಗೆ ಯುಐಡಿಎಐ 100 ರೂಪಾಯಿ ಶುಲ್ಕ ವಿಧಿಸುತ್ತಿದೆ. ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಲಾಗಿದೆ.
ನಿಮ್ಮ ಹೆಸರು ಅಥವಾ ವಿಳಾಸ ಅಥವಾ ಹುಟ್ಟಿದ ದಿನಾಂಕವನ್ನು ಬದಲಾಯಿಸಲು ನೀವು ಮಾನ್ಯ ದಾಖಲೆಗಳ ಜೊತೆ ಶುಲ್ಕ ಪಾವತಿಸಬೇಕಾಗುತ್ತದೆ. ಗುರುತಿನ ಪುರಾವೆಯಾಗಿ ಯುಐಡಿಎಐ 32 ದಾಖಲೆಗಳನ್ನು ಸ್ವೀಕರಿಸುತ್ತದೆ. 45 ದಾಖಲೆಗಳನ್ನು ವಿಳಾಸ ಪುರಾವೆಯಾಗಿ ಮತ್ತು 15 ದಾಖಲೆಗಳನ್ನು ಹುಟ್ಟಿದ ದಿನಾಂಕದ ಪುರಾವೆಯಾಗಿ ಸ್ವೀಕರಿಸುತ್ತದೆ.
ಆಧಾರ್ ನ ಕೆಲ ಮಾಹಿತಿ ನವೀಕರಣಕ್ಕೆ ನೀವು ದಾಖಲೆ ನೀಡಬೇಕಾಗಿಲ್ಲ. ಆಧಾರ್ ಗೆ ನಂಬರ್ ಲಿಂಕ್ ಮಾಡುವ ವೇಳೆ ದಾಖಲೆ ಅಗತ್ಯವಿಲ್ಲ. ಆಧಾರ್ ಸೇವೆಗಳಿಗಾಗಿ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಪಡೆಯಬಹುದು. ಇದರಲ್ಲಿ ಆಧಾರ್ ದಾಖಲಾತಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಹುಟ್ಟಿದ ದಿನಾಂಕ, ಲಿಂಗ ಅಥವಾ ಬಯೋಮೆಟ್ರಿಕ್ಸ್ ನವೀಕರಣ ಸೇರಿದೆ.