alex Certify ಅಂಚೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಮಾಹಿತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಮಾಹಿತಿ…!

ನೀವು ಅಂಚೆ ಇಲಾಖೆಯಲ್ಲಿ ವಿಮೆ ಪಾಲಿಸಿಯನ್ನೇದರೂ ಮಾಡಿಸಿದ್ದೀರಾ..? ಅಥವಾ ಆ ಪಾಲಿಸಿ 5 ವರ್ಷಗಳಲ್ಲಿ ಲ್ಯಾಪ್ಸ್ ಆಗಿದೆಯಾ..? ಇದಕ್ಕೆ ಚಿಂತೆ ಮಾಡಬೇಕಿಲ್ಲ. ಇದೋ ಅಂಚೆ ಇಲಾಖೆ ನಿಮಗೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ಲ್ಯಾಪ್ಸ್ ಆಗಿರುವ ಅಂಚೆ ಪಾಲಿಸಿಯನ್ನು ಪುನರುಜ್ಜೀವನಗೊಳಿಸಬಹುದು. ಇಂತದೊಂದು ಅವಕಾಶವನ್ನು ಅಂಚೆ ಇಲಾಖೆ ನೀಡಿದೆ.

ಹೌದು, ಅಂಚೆ ಜೀವ ವಿಮಾ ಇಲಾಖೆ ಈ ವಿಚಾರವಾಗಿ ಟ್ವಿಟ್ ಮಾಡಿದೆ. ಅಕ್ಟೋಬರ್ 2017ರಲ್ಲಿ ಸರ್ಕಾರ ಇದನ್ನು ಇತರ ಉದ್ಯೋಗಿಗಳಿಗೆ ಸಹಾಯವಾಗುವಂತೆ ಮಾಡಿತು. ಈ ಒಂದು ಯೋಜನೆ ಗ್ರಾಮೀಣ ಭಾಗಗಳಲ್ಲಿ ಜನರಿಗೆ ಅನುಕೂಲವಾಗಲಿ ಅನ್ನೋ ನಿಟ್ಟಿನಲ್ಲಿ ಯೋಜನೆಯನ್ನು ಪ್ರಾರಂಭಿಸಿತ್ತು. ಇದೀಗ ಇಂತಹ ಪಾಲಿಸಿಗಳು ಲ್ಯಾಪ್ಸ್ ಆಗಿದ್ದಲ್ಲಿ ಪುನಃ ಪ್ರಾರಂಭಿಸಲು ಅವಕಾಶವಿದೆ. ಇದನ್ನು ಆಗಸ್ಟ್ 31 ರೊಳಗೆ ಪುನರುಜ್ಜೀವನಗೊಳಿಸಬೇಕಾಗುತ್ತದೆ.

ಇದಕ್ಕಾಗಿ ನಿಮ್ಮ ಹತ್ತಿರದ ಅಂಚೆ ಇಲಾಖೆಯನ್ನು ಸಂಪರ್ಕ ಮಾಡಿ. ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ. ಇನ್ನು ಆನ್ ಲೈನ್ ಮೂಲಕ ನಿಮಗೆ ಬೇಕಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಅಂಚೆ ಕಚೇರಿ ಇಲಾಖೆಯಿಂದ ಎರಡು ಲಿಂಕ್‌ಗಳನ್ನು ನೀಡಲಾಗಿದೆ. https://play.google.com/store/apps/details?id=info.indiapost ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅಥವಾ https://indiapost.gov.in/vas/Pages/IndiaPostHome.aspx ಲಿಂಕ್ ಬಳಸಬಹುದು.

https://twitter.com/IndiaPostOffice/status/1278323261567193088?ref_src=twsrc%5Etfw%7Ctwcamp%5Etweetembed%7Ctwterm%5E1278323261567193088%7Ctwgr%5E&ref_url=https%3A%2F%2Fzeenews.india.com%2Fkannada%2Findia%2Fspecial-opportunity-to-revive-insurance-policy-which-has-been-lapse-5-years-ago-28614

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...