alex Certify ʼವಾಟ್ಸಾಪ್‌ʼ ಸಂದೇಶಗಳ ಮೇಲೆ ಕಣ್ಣಿಟ್ಟಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್‌ʼ ಸಂದೇಶಗಳ ಮೇಲೆ ಕಣ್ಣಿಟ್ಟಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಸದ್ಯ ದೇಶದಲ್ಲಿ ಹೊಸ ಐಟಿ ನಿಯಮ ಚರ್ಚೆಯಲ್ಲಿದ್ದು, ಈ ಹೊಸ ನಿಯಮದ ಪ್ರಕಾರ ಸೋಶಿಯಲ್​ ಮೀಡಿಯಾ ವೇದಿಕೆಗಳು ಬ್ಯಾನ್​ ಆಗಲಿದ್ಯಾ ಎಂಬ ಪ್ರಶ್ನೆ ಅನೇಕರನ್ನ ಕಾಡುತ್ತಿದೆ. ಈ ಗೊಂದಲದ ನಡುವೆಯೇ ವಾಟ್ಸಾಪ್​ ಕಾಲ್​ ಕುರಿತಾದ ತಪ್ಪು ಮಾಹಿತಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ರೌಂಡ್​ ಹಾಕುತ್ತಿದೆ.

ಕೇಂದ್ರ ಸರ್ಕಾರವು ಎಲ್ಲಾ ವಾಟ್ಸಾಪ್​ ಕರೆಗಳನ್ನ ರೆಕಾರ್ಡ್​ ಮಾಡುತ್ತಿದೆ. ಹಾಗೂ ನಿಮ್ಮ ವಾಟ್ಸಾಪ್​ ಸಂದೇಶದಲ್ಲಿ ಎರಡು ನೀಲಿ ಟಿಕ್​ ಹಾಗೂ ಒಂದು ಕೆಂಪು ಬಣ್ಣದ ಟಿಕ್​ ಕಂಡು ಬಂದಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನ ಸರ್ಕಾರ ಪಡೆದಿದೆ ಎಂದರ್ಥ. ಒಂದು ವೇಳೆ ನಿಮ್ಮ ಸಂದೇಶಕ್ಕೆ ಮೂರು ಕೆಂಪು ಬಣ್ಣದ ಟಿಕ್​ ಕಂಡು ಬಂದಿದೆ ಎಂದರೆ ಸರ್ಕಾರ ವಿಚಾರಣೆ ಆರಂಭಿಸಿದೆ ಎಂದರ್ಥ ಎಂಬ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ.

ಆದರೆ ಇದೊಂದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಕೇಂದ್ರ ಸರ್ಕಾರವು ಇಂತಹ ಯಾವುದೇ ನಿಯಮಾವಳಿಗಳನ್ನ ಜಾರಿಗೆ ತಂದಿಲ್ಲ. ವಾಟ್ಸಾಪ್​ ಕರೆಗಳನ್ನ ರೆಕಾರ್ಡ್ ಮಾಡುವ ಹಾಗೂ ಈ ಮೂರು ಟಿಕ್​ ವ್ಯವಸ್ಥೆ ಇದ್ಯಾವುದನ್ನೂ ಐಟಿ ಸಚಿವಾಲಯ ಜಾರಿಗೆ ತಂದಿಲ್ಲ.

ವಾಟ್ಸಾಪ್​ನಲ್ಲಿ ನೀವು ಕಳುಹಿಸಿದ ಸಂದೇಶಕ್ಕೆ ಎರಡು ನೀಲಿ ಬಣ್ಣದ ಟಿಕ್​ ಕಂಡುಬಂದಿದೆ ಅಂದರೆ ಆ ಮೆಸೇಜ್​ನ್ನು ವ್ಯಕ್ತಿಯು ನೋಡಿದ್ದಾರೆ ಎಂದರ್ಥ. ಇದನ್ನ ಹೊರತುಪಡಿಸಿ ಮಿಕ್ಕೆಲ್ಲ ಮಾಹಿತಿ ಕೇವಲ ಒಂದು ವದಂತಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...