alex Certify ʼಪೋರ್ನ್ ಸೈಟ್ʼ ನೋಡುವವರಿಗೆ ಗೂಗಲ್ ಗುಡ್ ನ್ಯೂಸ್: ಡೇಟಾ ಅಳಿಸಲು ಸರಳ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೋರ್ನ್ ಸೈಟ್ʼ ನೋಡುವವರಿಗೆ ಗೂಗಲ್ ಗುಡ್ ನ್ಯೂಸ್: ಡೇಟಾ ಅಳಿಸಲು ಸರಳ ವಿಧಾನ

ಅಶ್ಲೀಲ ಸೇರಿ ಇತರೆ ಯಾವುದೇ ಹುಡುಕಾಟದ ಇತಿಹಾಸವನ್ನು 15 ನಿಮಿಷಗಳಲ್ಲಿ ಅಳಿಸಲು ಗೂಗಲ್ ನಿಮಗೆ ಅನುಮತಿಸಲಿದೆ.

ದೈತ್ಯ ಟೆಕ್ ಡೆವಲಪರ್ ಗಳಿಗಾಗಿ ನಡೆದ ವಾರ್ಷಿಕ ಗೂಗಲ್ ಕಾನ್ಫರೆನ್ಸ್ ನಲ್ಲಿ ಹುಡುಕಾಟ ಇತಿಹಾಸ ತ್ವರಿತ ಅಳಿಸು(quick delete) ವೈಶಿಷ್ಟವನ್ನು ಘೋಷಿಸಲಾಗಿದೆ.

ಗೂಗಲ್ ತನ್ನ ಬಳಕೆದಾರರಿಗೆ ಕೊನೆಯ 15 ನಿಮಿಷಗಳ ಯಾವುದೇ ಹುಡುಕಾಟದ ಇತಿಹಾಸವನ್ನು ಸರಳ ಟ್ಯಾಪ್ ಮೂಲಕ ಅಳಿಸಲು ತ್ವರಿತ ಮಾರ್ಗವನ್ನು ತಂದಿದೆ. ಇದರಲ್ಲಿ ಬಳಕೆದಾರರಿಗೆ ಗೌಪ್ಯತೆ ಕಾಯ್ದುಕೊಳ್ಳಲು ಅನುಕೂಲವಾಗಲಿದೆ.

ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಅನುಮತಿಸುವ ಎರಡನೇ ಕಂಪನಿ ಗೂಗಲ್ ಆಗಿದೆ. 2020 ರ ಜನವರಿಯಲ್ಲಿ ಫೇಸ್ಬುಕ್ ವಿಶ್ವದಾದ್ಯಂತ ತನ್ನ ಬಳಕೆದಾರರಿಗೆ ಕ್ಲಿಯರ್ ಹಿಸ್ಟರಿ ಎಂಬ ‘ಈಸಿ ಬಟನ್’ ಪರಿಚಯಿಸಿತ್ತು.

ಗೂಗಲ್, ಫೇಸ್ಬುಕ್ ನಂತಹ ಕಂಪನಿಗಳು ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಗೌಪ್ಯತೆ ವೈಶಿಷ್ಟಗಳನ್ನು ಸೇರಿಸಿವೆ. ‘ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲವೆಂದು ಗೂಗಲ್ ಹಿರಿಯ ಉಪಾಧ್ಯಕ್ಷ ಜೆನ್ ಫಿಟ್ಜ್‌ ಪ್ಯಾಟ್ರಿಕ್ ಹೇಳಿದ್ದಾರೆ. ಬ್ಲೂಮ್ ಬರ್ಗ್ ವರದಿ ಪ್ರಕಾರ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.

ನಿಮ್ಮ ಇತ್ತೀಚಿನ ಗೂಗಲ್ ಹುಡುಕಾಟದ ಇತಿಹಾಸವನ್ನು ತ್ವರಿತವಾಗಿ ಅಳಿಸುವುದು ಹೇಗೆ..?

ನಿಮ್ಮ ಇತ್ತೀಚಿನ ಗೂಗಲ್ ಹುಡುಕಾಟದ ಇತಿಹಾಸವನ್ನು ತ್ವರಿತವಾಗಿ ಅಳಿಸುವುದನ್ನು ಎರಡು ಸರಳ ವಿಧಾನಗಳಲ್ಲಿ ಸಾಧಿಸಬಹುದಾಗಿದೆ. ಇದಕ್ಕೆ ನಿಮಗೆ ಬೇಕಾಗಿರುವುದು ಗೂಗಲ್ ಖಾತೆ ಮಾತ್ರ.

ಹಂತ 1 Google ಖಾತೆ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ drop-down ಮೆನು ಕಾಣಿಸುತ್ತದೆ.

ಹಂತ 2 ಕೊನೆಯ 15 ನಿಮಿಷಗಳನ್ನು ಅಳಿಸು ಕ್ಲಿಕ್ ಮಾಡಿ. ನಿಮ್ಮ ಇತ್ತೀಚಿನ ಇತಿಹಾಸದ ಡೇಟಾವನ್ನು ಅಳಿಸಲಾಗುತ್ತದೆ.

ಬ್ಲೂಂಬರ್ಗ್ ವರದಿ ಪ್ರಕಾರ, ಗೂಗಲ್ ಇವೆಂಟ್ ನಲ್ಲಿ ಪ್ರಾರಂಭಿಸಲಾದ ಇತರ ಗೌಪ್ಯತೆ ವೈಶಿಷ್ಟಗಳನ್ನು ಕೂಡ ಪಟ್ಟಿ ಮಾಡಿದ್ದು, ಇವುಗಳಲ್ಲಿ ಪಾಸ್ವರ್ಡ್ ರಕ್ಷಣೆ ಮತ್ತು ಅಂಡ್ರಾಯ್ಡ್ ಸಾಧನಗಳಿಗೆ ಡೇಟಾ ಬಳಸಲು ಅನುಮತಿ ನೀಡುತ್ತದೆ. ಈ ರೀತಿ ತಾಂತ್ರಿಕವಾಗಿ ಜಾರಿಗೊಳಿಸಲಾದ ಮತ್ತು ಪರಿಶೀಲನೆ ಮಾಡಬಹುದಾದ ಗೌಪ್ಯತೆಯನ್ನು ಬೇರೆ ಯಾರು ನೀಡುವುದಿಲ್ಲವೆಂದು ಫಿಡ್ಜ್ ಪ್ಯಾಟ್ರಿಕ್ ಹೇಳಿದ್ದಾರೆ.

ಮತ್ತೊಂದು ಟೆಕ್ ದೈತ್ಯ ಆಪಲ್ ತನ್ನ ಐಫೋನ್‌ಗಳನ್ನು ಗೂಗಲ್‌ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಚಾಲನೆಯಲ್ಲಿರುವ ಸಾಧನಗಳಿಗಿಂತ ಹೆಚ್ಚು ಸುರಕ್ಷಿತ ಸಾಧನವಾಗಿ ಇರಿಸಲು ವರ್ಷಗಳನ್ನೇ ಕಳೆದಿದೆ ಎಂದು ವರದಿ ತಿಳಿಸಿದೆ.

ಇನ್ನು ಬಳಕೆದಾರರು ತಮ್ಮ ಚಟುವಟಿಕೆಯ ಡೇಟಾವನ್ನು Google ನಿಂದ ಉಳಿಸಬೇಕೆಂದು ಬಯಸಿದರೆ, ಎಷ್ಟು ಸಮಯದವರೆಗೆ ಬಯಸುತ್ತಾರೆ ಎಂಬುದಕ್ಕೆ ಸಮಯ ಮಿತಿಯನ್ನು ಆಯ್ಕೆ ಮಾಡಬಹುದಾಗಿದೆ. ಅದಕ್ಕಿಂತ ಹಳೆಯದಾದ ಯಾವುದೇ ಡೇಟಾವನ್ನು ನಿಮ್ಮ ಖಾತೆಯಿಂದ ನಡೆಯುತ್ತಿರುವ ಆಧಾರದ ಮೇಲೆ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...