ನೌಕರರ ಭವಿಷ್ಯ ನಿಧಿ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಶೀಘ್ರವೇ 2019-2020ರ ಬಡ್ಡಿ ಹಣ ಪಿಎಫ್ ಖಾತೆ ಸೇರಲಿದೆ. 2019-20ನೇ ಸಾಲಿನಲ್ಲಿ ಶೇಕಡಾ 8.50 ರಷ್ಟು ಬಡ್ಡಿ ನೀಡಲು ಇಪಿಎಫ್ಒ ನಿರ್ಧರಿಸಿದೆ. ಈ ಬಾರಿ ಈ ಹಣವನ್ನು ಎರಡು ಕಂತುಗಳಲ್ಲಿ ಜಮಾ ಮಾಡಲಾಗುತ್ತದೆ. ಈ ತಿಂಗಳು ಶೇಕಡಾ 8.15 ರಷ್ಟು ಬಡ್ಡಿ ಜಮಾ ಮಾಡಲಾಗುವುದು. ಉಳಿದ ಶೇಕಡಾ 0.35 ರಷ್ಟನ್ನು ಡಿಸೆಂಬರ್ನಲ್ಲಿ ಜಮಾ ಮಾಡಲಾಗುವುದು.
ಇಪಿಎಫ್ಒನ ಕೇಂದ್ರ ಮಂಡಳಿಯ ಟ್ರಸ್ಟಿಗಳ ಸದಸ್ಯ ಪ್ರಭಾಕರ್ ಬನುಶೆರ್ ಪ್ರಕಾರ, ಎಲ್ಲಾ ಖಾತೆದಾರರಿಗೆ ಶೇಕಡಾ 8.5 ರ ದರದಲ್ಲಿ ಬಡ್ಡಿ ಪಾವತಿಸಲು 61000 ಕೋಟಿಗಳಷ್ಟು ಹಣದ ಅಗತ್ಯವಿದೆ. ಆದರೆ ಇಪಿಎಫ್ಒ ಬಳಿ ಈಗ ಅಷ್ಟು ಹಣವಿಲ್ಲ. ಆ ಕಾರಣದಿಂದಾಗಿ ಈಗ 8.15 ಶೇಕಡಾ ನೀಡಲಾಗುವುದು.
ಪಿಎಫ್ ಬ್ಯಾಲೆನ್ಸ್ ಚೆಕ್ ನಡೆಸಲು ಇಪಿಎಫ್ಒ ತನ್ನ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದೆ. ಮಿಸ್ಡ್ ಕಾಲ್ ಮೂಲಕ ಇಪಿಎಫ್ಒ ಚಂದಾದಾರರು ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಲ್ಲದೆ, ಪಿಎಫ್ ಬ್ಯಾಲೆನ್ಸನ್ನು ಆನ್ಲೈನ್ ಅಥವಾ ಎಸ್ಎಂಎಸ್ ಮೂಲಕವೂ ತಿಳಿಯಬಹುದು. ಸದಸ್ಯ ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕರೆ ಮಾಡಬೇಕಾಗುತ್ತದೆ.