ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಏರಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 710 ರೂಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆ 313 ರೂಪಾಯಿ ಹೆಚ್ಚಾಗಿದೆ.
ವಿದೇಶಿ ಸ್ಪಾಟ್ ಮಾರುಕಟ್ಟೆಯಲ್ಲಿ ಬೆಲೆ 1,981 ಡಾಲರ್ ಗರಿಷ್ಠ ಮಟ್ಟ ತಲುಪಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 2,026 ಡಾಲರ್ ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ.
ಬುಧವಾರ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಶುದ್ಧತೆ ಚಿನ್ನದ ಬೆಲೆ ಹತ್ತು ಗ್ರಾಂಗೆ 53,797 ರೂಪಾಯಿ ಏರಿಕೆಯಾಗಿದೆ. ಮುಂಬೈನಲ್ಲಿ ಶೇಕಡಾ 99.9 ರಷ್ಟು ಶುದ್ಧ ಚಿನ್ನದ ಬೆಲೆ 52,760.00 ರೂಪಾಯಿಯಾಗಿದೆ. ಬುಧವಾರ ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ದೆಹಲಿಯಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 65,227 ರೂಪಾಯಿಗಳಿಂದ 65,540 ರೂಪಾಯಿಗೆ ಏರಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು.