ದೇಶದಾದ್ಯಂತ ಕೊರೊನಾ ಸದ್ಯ ನಿಯಂತ್ರಣಕ್ಕೆ ಬರ್ತಿದೆ. ಆದ್ರೆ ಮತ್ತೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಒಂದು ಲಕ್ಷ ಟನ್ ಆಕ್ಸಿಜನ್ ವಿದೇಶದಿಂದ ಆಮದು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ತಿದೆ. ನೀವು ಆಕ್ಸಿಜನ್ ಸಿಲಿಂಡರ್ ವ್ಯವಹಾರ ಶುರು ಮಾಡಿ ಗಳಿಕೆ ಮಾಡಬಹುದು.
ವೈದ್ಯಕೀಯ ಆಕ್ಸಿಜನ್ ಸಿಲಿಂಡರ್‌ನ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು, ಅದರ ತಯಾರಕರನ್ನು ಸಂಪರ್ಕಿಸಬೇಕಾಗುತ್ತದೆ. ಆಕ್ಸಿಜನ್ ಉತ್ಪಾದನೆಯಿಂದ ಹಿಡಿದು ಸಿಲಿಂಡರ್ ತುಂಬಿಸುವವರೆಗೆ ಎಲ್ಲ ಮಾಹಿತಿಯನ್ನು ತಯಾರಕರು ನಿಮಗೆ ನೀಡ್ತಾರೆ. ವ್ಯವಹಾರ ಶುರು ಮಾಡುವ ಮೊದಲು, ಅದಕ್ಕೆ ಬೇಕಾಗುವ ಸಾಮಗ್ರಿಯಿಂದ ಹಿಡಿದು ಮಾರಾಟದ ಬಗ್ಗೆ ಎಲ್ಲವನ್ನೂ ತಿಳಿದಿರಬೇಕು.ಈ ವ್ಯವಹಾರ ಶುರು ಮಾಡಲು ನೀವು ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ.
ಈ ವ್ಯವಹಾರವನ್ನು ಸಣ್ಣ ಮಟ್ಟದಲ್ಲಿ ಶುರು ಮಾಡಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ವ್ಯವಹಾರಕ್ಕೆ 10ರಿಂದ 20 ಲಕ್ಷ ರೂಪಾಯಿ ಬೇಕಾಗುತ್ತದೆ. ನೀವು ಬ್ಯಾಂಕ್ ಮೂಲಕ ಸಾಲ ಪಡೆದು ವ್ಯವಹಾರ ಶುರು ಮಾಡಬಹುದು. ಇದು ಸುಲಭವಾದ ವ್ಯವಹಾರವಲ್ಲ. ಹೆಚ್ಚು ರಿಸ್ಕ್ ಇರುವ ವ್ಯವಹಾರ. ಉತ್ಪಾದನಾ ಘಟಕದಲ್ಲಿ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದ್ರೆ ಉತ್ತಮ ಗಳಿಕೆಯ ವ್ಯವಹಾರದಲ್ಲಿ ಇದೊಂದು. ಇದಕ್ಕೆ ಸದಾ ಬೇಡಿಕೆಯಿರುತ್ತದೆ. ಸರ್ಕಾರಕ್ಕೆ ನೀವು ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡಿ ಗಳಿಸಬಹುದು.