alex Certify ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ ತಡಕಾಡುವ ಬದಲು ಮೊದಲೇ ಹಣ ಹೂಡಿಕೆ ಮಾಡಿದ್ದರೆ ಆಪತ್ ಕಾಲದಲ್ಲಿ ನೆರವಾಗುತ್ತದೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗ್ತಿದ್ದು, ಅದಕ್ಕಾಗಿ ಅನೇಕ ವಿಮೆಗಳು ನೆರವಿಗೆ ಬರುತ್ತದೆ.

ಆರೋಗ್ಯ ವಿಮೆ: ಕೊರೊನಾ ಈಗ ವಿಶ್ವವನ್ನು ತತ್ತರಿಸುವಂತೆ ಮಾಡಿದೆ. ಕೊರೊನಾ ನಿಮ್ಮನ್ನು ಕಾಡುವುದಿಲ್ಲ ಎನ್ನಲು ಸಾಧ್ಯವಿಲ್ಲ. ಕೊರೊನಾ ಕಾಲದಲ್ಲಿ ಆರೋಗ್ಯ ವಿಮೆ ಹೊಂದಿರುವುದು ಅಗತ್ಯ. ಇದ್ರಲ್ಲಿ ಐದು ಲಕ್ಷದವರೆಗೆ ವೈಯಕ್ತಿಕ ಪಾಲಿಸಿಯನ್ನು ಪಡೆಯಬಹುದು. ಆರೋಗ್ಯ ವಿಮೆ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಾತ್ರವಲ್ಲ ಉಳಿದ ಸಮಯದಲ್ಲೂ ನಿಮಗೆ ನೆರವಾಗಲಿದೆ.

ಸೈಬರ್ ವಿಮೆ: ಕೊರೊನಾ ವೈರಸ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಸೈಬರ್ ಅಪಾಯವನ್ನು ಹೆಚ್ಚಿಸಿದೆ. ಕಚೇರಿಗೆ ಹೋಲಿಸಿದರೆ ಮನೆಯಿಂದ ಕೆಲಸ ಮಾಡುವವರಿಗೆ ಸೈಬರ್ ಅಪಾಯ ಹೆಚ್ಚು. ಇಮೇಲ್ ಹ್ಯಾಕ್ಸ್, ಫಿಶಿಂಗ್ ಇತ್ಯಾದಿ ಘಟನೆಗಳು ಹೆಚ್ಚುತ್ತಿವೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪೋನ್ಸ್ ತಂಡವು ಆಗಸ್ಟ್ ವರೆಗೆ ಏಳು ಲಕ್ಷ ಸೈಬರ್ ದಾಳಿಯ ವರದಿ ಮಾಡಿದೆ. ಕಳೆದ ವರ್ಷ ಇದು ನಾಲ್ಕು ಲಕ್ಷದಷ್ಟಿತ್ತು. ಇದನ್ನು ಗಮನಿಸಿದ್ರೆ ಸೈಬರ್ ವಿಮೆ ಕಂಪನಿಗಳಿಗೆ ಮಾತ್ರವಲ್ಲ, ವೈಯಕ್ತಿಕವಾಗಿಯೂ ಅಗತ್ಯವಾಗಿರುತ್ತದೆ.

ಮೋಟಾರ್ ವಿಮೆ: ಕಚೇರಿಗೆ ಹೋಗ್ತಿಲ್ಲ, ಈಗ್ಯಾಕೆ ಮೋಟರ್ ವಿಮೆ ಎನ್ನಬಹುದು. ಆದ್ರೆ ಮೋಟರ್ ವಿಮೆ ಕೂಡ ಅಗತ್ಯವಿದೆ. ಸಾರ್ವಜನಿಕ ಸಾರಿಗೆ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ವಾಹನಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹಾಗೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರೂ ನೀವು ವಾಹನ ವಿಮೆ ಪಡೆಯಬಹುದು.

ಗೃಹ ವಿಮೆ: ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮನೆಯಿಂದ ಹೊರಹೋಗುವವರ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಮನೆ ಕಳ್ಳತನವಾಗುವ ಸಂಭವ ಕಡಿಮೆ. ಆದ್ರೆ ಎಲ್ಲರೂ ಮನೆಯಲ್ಲಿಯೇ ಇರುವುದ್ರಿಂದ ಮನೆ ಸಂಪನ್ಮೂಲಗಳ ಬಳಕೆ ಹೆಚ್ಚಾಗಿದೆ. ಇದು ಬೆಂಕಿ ಅನಾಹುತ, ಶಾರ್ಟ್ ಸರ್ಕ್ಯೂಟ್ ನಂತಹ ಅಪಘಾತಗಳಿಗೆ ಕಾರಣವಾಗಬಹುದು. ಸಣ್ಣ ಹಾನಿ ಕೂಡ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಗೃಹ ವಿಮೆ ಪಡೆಯುವುದು ಒಳ್ಳೆಯದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...