ಆಧಾರ್ ಕಾರ್ಡ್ ಈಗ ಬಹುತೇಕ ಕೆಲಸಗಳಿಗೆ ಅನಿವಾರ್ಯವಾಗಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಅನಿವಾರ್ಯ. ಆದ್ರೆ ಖಾಯಂ ವಿಳಾಸವನ್ನು ಆಧಾರ್ ನಲ್ಲಿ ನೀಡಿದಾಗ ಕೆಲ ಸಮಸ್ಯೆಗಳಾಗುತ್ತವೆ. ಇನ್ಮುಂದೆ ಆಧಾರ್ ಗೆ ನೀವು ಖಾಯಂ ವಿಳಾಸ ನೀಡಬೇಕಾಗಿಲ್ಲ. ಬಾಡಿಗೆ ಮನೆ ವಿಳಾಸವನ್ನು ನೀವು ನೀಡಬಹುದು.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಬಾಡಿಗೆದಾರರ ವಿಳಾಸಗಳನ್ನು ನವೀಕರಿಸಲು ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದೆ. ಬಾಡಿಗೆ ಒಪ್ಪಂದವನ್ನು ಬಳಸಿಕೊಂಡು ಆಧಾರ್ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಬಾಡಿಗೆ ಒಪ್ಪಂದದಲ್ಲಿ ನಿಮ್ಮ ಹೆಸರು ಆಧಾರ್ ಕಾರ್ಡ್ನಲ್ಲಿರುವ ಹೆಸರಿನಂತಿರಬೇಕು.
ಆನ್ಲೈನ್ ನಲ್ಲಿಯೇ ಈ ಸಂಪೂರ್ಣ ವಿಳಾಸ ಬದಲಾವಣೆ ಮಾಡಬಹುದು. ಮೊದಲು ಬಾಡಿಗೆ ಒಪ್ಪಂದವನ್ನು ಸ್ಕ್ಯಾನ್ ಮಾಡಿ, ನಂತರ ಅದರ ಪಿಡಿಎಫ್ ಮಾಡಿ. ನಂತ್ರ ಯುಐಡಿಎಐನ ಅಧಿಕೃತ ಸೈಟ್ https://uidai.gov.in/ ಗೆ ಹೋಗಿ ಅಲ್ಲಿ ವಿಳಾಸ ನವೀಕರಣದ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಲಾಗಿನ್ ಮಾಡಬೇಕು. ಇದರ ನಂತರ ಮೊಬೈಲ್ನಲ್ಲಿ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ನಂತ್ರ ವಿಳಾಸ ಬದಲಿಸಬೇಕು.
ಆಫ್ಲೈನ್ ನಲ್ಲಿಯೂ ವಿಳಾಸ ಬದಲಿಸಬಹುದು. ಆಧಾರ್ ಕೇಂದ್ರದಿಂದ ಆಧಾರ್ ನವೀಕರಣ ಅಥವಾ ತಿದ್ದುಪಡಿ ಫಾರ್ಮ್ ತೆಗೆದುಕೊಳ್ಳಿ. ಇದರಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಫಾರ್ಮ್ನಲ್ಲಿ ವಿಳಾಸ ನವೀಕರಣವನ್ನು ನಮೂದಿಸಿ. ಆಧಾರ್ ಕಾರ್ಡ್ನ ಫೋಟೊ ಕಾಪಿ ಜೊತೆಗೆ ಪ್ಯಾನ್ ಕಾರ್ಡ್, ಬಾಡಿಗೆ ಪತ್ರ, ಮತದಾರರ ಕಾರ್ಡ್ ಅಥವಾ ಪಾಸ್ಪೋರ್ಟ್ ನೀಡಬೇಕಾಗುತ್ತದೆ. ವಿವರಗಳನ್ನು ನವೀಕರಿಸಲು 50 ರೂಪಾಯಿ ನೀಡಬೇಕಾಗುತ್ತದೆ.