alex Certify ʼಆಧಾರ್ʼ ‌ಗೆ ಪಾನ್ ಕಾರ್ಡ್ ಜೋಡಣೆ ಮಾಡುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ‌ಗೆ ಪಾನ್ ಕಾರ್ಡ್ ಜೋಡಣೆ ಮಾಡುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಮಹಾಮಾರಿ ಕೊರೊನಾ ಅಟ್ಟಹಾಸ ದೇಶದೆಲ್ಲೆಡೆ ಜೋರಾಗಿದೆ. ಹೀಗಿರುವಾಗ ಯಾವುದೇ ಕೆಲಸ ಕಾರ್ಯ ಮಾಡಬೇಕೆಂದರೂ ಕೊರೊನಾ ಅಡ್ಡಿಪಡಿಸುತ್ತಲೇ ಇದೆ. ಹೀಗಾಗಿ ಸರ್ಕಾರ, ಜನಸಾಮಾನ್ಯರ ದೃಷ್ಟಿಯಿಂದ ಆಧಾರ್ ‌ಗೆ ಪಾನ್ ಕಾರ್ಡ್ ಜೋಡಣೆಯ ಗಡುವನ್ನು ವಿಸ್ತರಣೆ ಮಾಡಿದೆ.

ಹೌದು, ಆಧಾರ್ ಕಾರ್ಡ್ ‌ಗೆ ಪಾನ್ ಕಾರ್ಡ್‌ನ ಜೋಡಣೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಹಾಗೂ ಆಧಾರ್‌ಗೆ ಪಾನ್ ಜೋಡಿಸಲು ಜೂನ್ 30 ಅಂತಿಮ ಗಡುವು ನೀಡಲಾಗಿತ್ತು. ಜೂನ್ 30ರ ಒಳಗೆ ಜೋಡಣೆಯಾಗದೇ ಇದ್ದರೆ ಪಾನ್ ಕಾರ್ಡ್‌ಧಾರಕರಿಗೆ 10 ಸಾವಿರ ದಂಡ ವಿಧಿಸುವ ಪ್ರಸ್ತಾವನೆ ಕೂಡ ಮಾಡಲಾಗಿತ್ತು. ಆದರೆ ಇದೀಗ ಈ ಗಡುವನ್ನು ವಿಸ್ತರಣೆ ಮಾಡಿದೆ.

ಇದರಿಂದ ಪಾನ್ ಕಾರ್ಡ್‌ದಾರರಿಗೆ ಒಂದು ನೆಮ್ಮದಿಯ ಸುದ್ದಿ ದೊರೆತಂತಾಗಿದೆ. ಇನ್ನು ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಜೋಡಿಸುವ ಅಂತಿಮ ಗಡುವನ್ನು ಮುಂದಿನ ವರ್ಷ ಅಂದರೆ 2021 ಮಾರ್ಚ್ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ ಕೇಂದ್ರ ನೇರ ತೆರಿಗೆ ಮಂಡಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...