HomeBusinessಬಂಗಾರದ ಬೆಲೆಯಲ್ಲಿ ಭಾರಿ ಏರಿಳಿತ: ಚಿನ್ನದ ದರ: 100 ಗ್ರಾಂ ಅಪರಂಜಿ ಚಿನ್ನಕ್ಕೆ 6,500 ರೂ. ಹೆಚ್ಚಳ...

ಬಂಗಾರದ ಬೆಲೆಯಲ್ಲಿ ಭಾರಿ ಏರಿಳಿತ: ಚಿನ್ನದ ದರ: 100 ಗ್ರಾಂ ಅಪರಂಜಿ ಚಿನ್ನಕ್ಕೆ 6,500 ರೂ. ಹೆಚ್ಚಳ ಬೆಳ್ಳಿಯ ಬೆಲೆ 5,000 ರೂ. ಇಳಿಕೆ

ಬೆಂಗಳೂರು: ಯುಗಾದಿ ಹಬ್ಬ ಮುಗಿದ ಬೆನ್ನಲ್ಲೇ ಬಂಗಾರ ಪ್ರಿಯರಿಗೆ ಅಘಾತ ಎದುರಾಗಿದೆ. ನಿನ್ನೆಯಷ್ಟೇ ಬರೋಬ್ಬರಿ 7 ಸಾವಿರ ರೂಪಾಯಿಗಳಷ್ಟು ಭಾರಿ ಕುಸಿತ ಕಂಡು ಸಂಭ್ರಮ ತಂದಿದ್ದ ಚಿನ್ನದ ಬೆಲೆ, ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆ ಮುಂದುವರಿದಿರುವುದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ.

ಇಂದಿನ ಚಿನ್ನದ ದರ ಎಷ್ಟು? (ಮಾರ್ಚ್ 20, 2026)

ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 10 ಗ್ರಾಂ ಚಿನ್ನದ ಬೆಲೆ ಇಂದು 650 ರೂ. ಏರಿಕೆಯಾಗಿದ್ದು, 1,50,930 ರೂ. ತಲುಪಿದೆ. (1 ಗ್ರಾಂಗೆ 15,093 ರೂ.)

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಆಭರಣ ಚಿನ್ನದ ದರದಲ್ಲೂ ಕೂಡ ಇಂದು ಏರಿಕೆ ದಾಖಲಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರೂ ಮತ್ತು ಹಣದುಬ್ಬರ ಹೆಚ್ಚುತ್ತಿದ್ದರೂ, ಕಳೆದ ಒಂದು ವಾರದಿಂದ ಬೆಲೆಗಳು ಇಳಿಯುತ್ತಿದ್ದವು. ಆದರೆ ಇಂದು ಶುಕ್ರವಾರ ಸ್ಥಳೀಯ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ.

ಫೆಡರಲ್ ರಿಸರ್ವ್ ಪ್ರಭಾವ:

ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಡಾಲರ್ ಮೌಲ್ಯ ಮತ್ತು ಯುಎಸ್ ಟ್ರೆಜರಿ ಬಾಂಡ್ ಇಳುವರಿ ಹೆಚ್ಚುತ್ತಿರುವ ಕಾರಣ, ಹೂಡಿಕೆದಾರರು ಚಿನ್ನದ ಬದಲಿಗೆ ಅವುಗಳತ್ತ ಮುಖ ಮಾಡುತ್ತಿದ್ದಾರೆ. ಇದು ಜಾಗತಿಕವಾಗಿ ಚಿನ್ನದ ಬೆಲೆ ಪತನಕ್ಕೆ ಕಾರಣವಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಇಂದು ಸಣ್ಣ ಪ್ರಮಾಣದ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನದ ಬೆಲೆ:

1 ಗ್ರಾಂ ಬೆಲೆ ಇಂದು ರೂ. 15,093

10 ಗ್ರಾಂ 24 ದರ ಇಂದು ರೂ. 1,50,930

100 ಗ್ರಾಂ ಇಂದು ರೂ. 15,09,300

ಇಂದಿನ ಬೆಳ್ಳಿ ದರ ಪಟ್ಟಿ (ಮಾರ್ಚ್ 20, 2026):

ಇಂದು ಪ್ರತಿ ಕೆಜಿ ಬೆಳ್ಳಿಯ ಮೇಲೆ ಬರೋಬ್ಬರಿ 5,000 ರೂಪಾಯಿಗಳಷ್ಟು ಇಳಿಕೆ ದಾಖಲಾಗಿದೆ. ವಿವರ ಇಲ್ಲಿದೆ:

1 ಗ್ರಾಂ ಬೆಳ್ಳಿ: ಇಂದು 255 ರೂ. (ನಿನ್ನೆ 260 ರೂ. ಇತ್ತು – 5 ರೂ. ಇಳಿಕೆ)

10 ಗ್ರಾಂ ಬೆಳ್ಳಿ: ಇಂದು 2,550 ರೂ. (ನಿನ್ನೆ 2,600 ರೂ. ಇತ್ತು – 50 ರೂ. ಇಳಿಕೆ)

100 ಗ್ರಾಂ ಬೆಳ್ಳಿ: ಇಂದು 25,500 ರೂ. (ನಿನ್ನೆ 26,000 ರೂ. ಇತ್ತು – 500 ರೂ. ಇಳಿಕೆ)

1 ಕಿಲೋಗ್ರಾಂ ಬೆಳ್ಳಿ: ಇಂದು 2,55,000 ರೂ. (ನಿನ್ನೆ 2,60,000 ರೂ. ಇತ್ತು – 5,000 ರೂ. ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)

ಚೆನ್ನೈ: ₹15,163

ಮುಂಬೈ: ₹15,093

ದೆಹಲಿ: ₹15,108

ಕೋಲ್ಕತ್ತಾ: ₹15,093

ಬೆಂಗಳೂರು: ₹15,093

ಹೈದರಾಬಾದ್: ₹15,093

ಕೇರಳ: ₹15,093

ಪುಣೆ: ₹15,093

ವಡೋದರಾ: ₹15,098

ಅಹಮದಾಬಾದ್: ₹15,098

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular