ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಜಿಲ್ಲಾಡಳಿತದಿಂದ ಉತ್ಖನನ ಕಾರ್ಯ ಮುಂದುವರೆದಿದೆ. ಲಕ್ಕುಂಡಿಯಲ್ಲಿ ಬಗೆದಷ್ಟು ಗತ ವೈಭವವನ್ನು ಸಾರುವ ಅಮೂಲ್ಯ ವಸ್ತುಗಳು, ಶಿಲಾ ವಿಗ್ರಹಗಳು ಪತ್ತೆಯಾಗುತ್ತಿವೆ. ಇಂದು 9 ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ.
ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ಮುಂದುವರೆದಿದ್ದು, 35 ಕಾರ್ಮಿಕರು ಉತ್ಖನನದ ಕೆಲಸಲ್ಲಿ ತೊಡಗಿದ್ದಾರೆ. ನೆಲದಲ್ಲಿನ ಮಣ್ಣು ತೆಗೆದಷ್ಟು ಪುರಾತನ ವಸ್ತುಗಳು, ಅಮೂಲ್ಯ ವಸ್ತುಗಳು ಪತ್ತೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲವನ್ನು ಇಮ್ಮಡಿಹೊಳಿಸಿದೆ. ಇಂದು ತೋಟದ ಮನೆಯ ಗೋಡೆಯಲ್ಲಿ, ಅಕ್ಕಪಕ್ಕದ ಮನೆಗಳ ಗೋಡೆಗಳಲ್ಲಿ ಶಿಲೆಗಳು ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿವೆ.
ನಿನ್ನೆ ೮ ನೇ ದಿನದ ಉಖನನದ ವೇಳೆ ಲೋಹದಂತಹ ವಸ್ತು ಪತ್ತೆಯುಗಿತ್ತು. ಅರ್ಧ ಕೆಜಿ ತೂಕದ ಲೋಹದ ಗುಂಡು ಇದಾಗಿದೆ. ಇದೇ ವೇಳೆ ಆಭರಣಗಳಲ್ಲಿ ಬಳಸುವ ಪಚ್ಚೆ ಕಲ್ಲು ಕೂಡ ಪತ್ತೆಯಾಗಿತ್ತು. ಈಗಾಗಲೆ ಉತ್ಖನನದ ವೇಳೆ ನಾಲ್ಕು ಬ್ಲಾಕ್ ರೀತಿಯಲ್ಲಿ ಮಣ್ಣು ತೆಗೆಯಲಾಗಿದ್ದು, ಹಲವಾರು ಪುರಾತನ ವಸ್ತುಗಳು, ಶಿವಲಿಂಗ, ನಾಗರಕಲ್ಲು, ವಿಗ್ರಹ, ದೇವಸ್ಥಾನದಂತ ಕುರುಹುಗಳು, ನವಶಿಲಾಯುಗದ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೊಟಾದ ಬಿಲ್ಲೆಯಂತಹ ವಸ್ತು, ಪ್ರಾಚ್ಯ ಅವಶೇಷ ಪತ್ತೆಯಾಗಿವೆ.
ಇಂದು 9ನೇ ದಿನದ ಉಕ್ತ್ಖನನ ಕಾರ್ಯ ಮುಂದುವರೆದಿರುವಾಗಲೇ ವೀರಭದ್ರೇಶ್ವರ ದೇವಾಲದ ಪಕ್ಕದಲ್ಲಿಯೇ ಇರುವ ಬಳಗಾನೂರು ಎಂಬುವವರ ತೋಟದಲ್ಲಿ ಬಾವಿಯ ಸುತ್ತ ಇರುವ ಗೋಡೆಯಲ್ಲಿ ಶಿಲೆಗಳು ಪತ್ತೆಯಾಗಿವೆ. ಶಿಲೆಗಳ ಜೊತೆಯಲ್ಲಿಯೇ ಗೋಡೆ ನಿರ್ಮಿಸಲಾಗಿದೆಯೇ? ಅಥವಾ ಪುರಾತನ ಕಾಲದಿಂದಲೂ ಇರುವ ಗೋಡೆ ಇದಾಗೆದೆಯೇ? ಎಂಬ ಕುತೂಹಲ ಮೂಡಿಸಿದೆ.
ಇದೇ ವೇಳೆ ದೇವಸ್ಥಾನದ ಸಮೀಪವೇ ಇರುವ ಇನ್ನೊಂದು ಮನೆಯಲ್ಲಿ ಗೋಡೆಗಳಲ್ಲಿಯೂ ಐತಿಹಾಸಿಕ ಶಿಲೆಗಳು ಪತ್ತೆಯಾಗಿವೆ. ಗಣಪತಿ ವಿಗ್ರಹ, ಶಿವಲಿಂಗದ ಶಿಲೆ, ನಾಗರ ಕಲ್ಲು, ದ್ವಾರಪಾಲಕರ ಶಿಲೆ, ದೇವಸ್ಥಾನದ ಬಾಗಿಲಿನಲ್ಲಿ ಅಲಂಕರಿಸುವಂತಹ ಕಲ್ಲಿನ ಕೆತ್ತನೆ ಹೀಗೆ ವಿವಿಧ ರೀತಿಯ ಪುರಾತನ ವಸ್ತುಗಳು ಪತ್ತೆಯಾಗಿವೆ. ಇವುಗಳು ಕಲ್ಯಾಣ ಚಾಅಲುಕ್ಯರ ಕಾಲದ ಶಿಲೆಗಳಾಗಿದ್ದು, ಲಕ್ಕುಂಡಿಯ ಗತವೈಭವಕ್ಕೆ ಸಾಕ್ಷಿಗಳಾಗಿವೆ ಎಂದು ಹೇಳಲಾಗುತ್ತಿದೆ.
ಲಕ್ಕುಂಡಿಯ ವೀರಭದ್ರೇಶ್ವರ ದೇವಾಲಯದ ಬಳಿ ಉತ್ಖನನ ಕಾರ್ಯ ಮುಂದುವರೆದಿದ್ದು, ಇನ್ನಷ್ಟು ಆಳ ಮಣ್ಣು ತೆಗೆದರೆ ರಾಜ-ಮಹಾರಾಜರ ಕಾಲದ ಅತ್ಯಮೂಲ್ಯ ವಸ್ತುಗಳು, ನೈಜ ಲಕ್ಕುಂಡಿಯ ವೈಭವ ಪತ್ತೆಯಾಗಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

