ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹಿಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ, ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ನಡೆಸಿದ್ದು ಯಾರು? ನಮಗೆ ಎಲ್ಲಾ ಗೊತ್ತಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಹಲವು ವಿಚಾರಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿ ಹೇಳುತ್ತೇನೆ ಎಂದು ನಾನು ಒಂದು ಪದ ಬಳಸಿದ್ದಕ್ಕೆ ಕಳೆದ ಹತ್ತು ದಿನಗಳಿಂದ ಕುಮಾರಸ್ವಾಮಿ ಯಾವಾಗ ಬರ್ತಾರೆ? ನಂದೇನಿದೆ, ನಂದೇನಿದೆ ಎಂದು ಎಷ್ಟು ಜನ ರಾತ್ರಿಯೆಲ್ಲಾ ಕನವರಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಆದರೆ ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡಲ್ಲ ಒಳ್ಳೆಯ ಆಹಾರ ಕೊಡ್ತೇನೆ ಎಂದರು.
ಈಗಾಗಲೇ ರಾಜಣ್ಣರ ಧ್ವನಿ ನಿಲ್ಲಿಸಿದ್ರು, ರಮೇಶ್ ಜಾರಕಿಹೋಳಿ ಮುಗ್ಸಿದ್ರು. ಸತೀಶ್ ಜಾರಕಿಹೊಳಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಹೀಗಾಗಿ ಈಗ ಅವರನ್ನೂ ಹೇಗೆ ಮುಗಿಸಬೇಕೆಂದು ಸಿದ್ದತೆ ಮಾಡಿಕೊಂಡರು. ಪಾಪ ನಾಗೇಂದ್ರ ಅವರದ್ದು ಯಾವ್ಯಾವ ತರ ನಡೀತು? ನಂಗೇನೂ ಆತುರ ಇಲ್ಲ. ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದವರು ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಬಳಿಕ ಮುಖ್ಯಮಂತ್ರಿಗಳು ಏನು ಹೇಳಿದ್ದಾರೆ? ಇನ್ನೂ ಮೂರ್ನಾಲ್ಕು ನಾಯಕರ ಮನೆ ಮೇಲೆ ದಾಳಿಯಾಗುತ್ತೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಇಡಿ ದಾಳಿ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಅದನ್ನು ಅವರೇ ಹೇಳಬೇಕು ಎಂದರು.
ಕಾಂಗ್ರೆಸ್ ನವರೇ ದೂರು ನೀಡಿದ್ದಾರೆ ಎಂದು ಸತೀಶ್ ಜಾರಕಿಹಿಳಿ ಹೇಳುತ್ತಿದ್ದಾರೆ. ಸಿಎಂ ಅವರು ಇನ್ನೂ ಮೂರ್ನಾಲ್ಕು ಜನರ ಮೇಲೆ ರೇಡ್ ಆಗುತ್ತೆ ಅಂತಿದ್ದಾರೆ ಅಂದ್ರೆ ಇವರೇ ಯಾಕೆ ಮಾಡಿಸಿರಬ್ನಾರದು? ಈಗಾಗಲೇ ರಾಜಣ್ಣನ ಧ್ವನಿ ನಿಲ್ಲಿಸಿದರು. ಹಿಂದೆ ರಮೇಶ್ ಜಾರಕಿಹೊಳಿಯನ್ನು ಮುಗಿಸಿದರು. ಸತೀಶ್ ಜಾರಕಿಹೊಳಿಯವರು ಪದೇ ಪದೇ ಕೆಪಿಸಿಸಿ ಹಗೂ ಸಿಎಂ ಸ್ಥಾನದ ಬಗ್ಗೆ ಹೇಳುತ್ತಿದ್ದರು. ಹಾಗಾಗಿ ಅವರನ್ನು ಮುಗಿಸಲು ಸಿದ್ಧತೆ ಮಾಡಿಕೊಂಡರು. ಹೀಗೆ ಇವರದ್ದೇ ಬೇಕಾದಷ್ಟು ವಿಷಯಗಳಿವೆ ಎಂದರು,.
ಸಿಎಂ ಡಿ.ಕೆ,ಶಿವಕುಮಾರ್ ಲೂಟಿ ಮಾಡಿಯೇ ಅಧಿಕಾರಕ್ಕೆ ಬಂದಿದ್ದು. ಎಷ್ಟು ಲೂಟಿ ಮಾಡಿಲ್ಲ ಅವರು. ಅವರೇ ಹೇಳಿದ್ದಾರೆ. ಬರಿ ವಿದ್ಯಾವಂತ ಆದರೆ ಸಾಲದು, ಬುದ್ಧಿವಂತನೂ ಆಗಬೇಕು ಎಂದಿದ್ದಾರೆ. ಅವರು ಹೇಳಿದ್ದು ನಿಜ. ಬುದ್ಧಿವಂತನಾದ್ರೆ ಮಾತ್ರ ಇದೆಲ್ಲ ಮಾಡಲು ಸಾಧ್ಯ ಎಂದು ಟಾಂಗ್ ನೀಡಿದರು.
ಸಿಎಂ ಅಧಿಕಾರಕ್ಕೆ ಬಂದು ನೂರು ದಿನವಾಯಿತು ಎಂದು ಸಂಭ್ರಮಾಚರಣೆ ಮಾಡಿ ಬುಕ್ ಲೆಟ್ ಮಾಡಿದ್ದಾರೆ. ಒಂದು ಸಚಿವ ಸಂಪುಟ ವಿಸ್ತರಣೆ ಮಾಡಲು ಎಷ್ಟು ದಿನ ತೆಗೆದುಕೊಂಡರು? ಖಾತೆ ಹಂಚಿಕೆಗೆ ಎಷ್ಟು ದಿನ ತೆಗೆದುಕೊಂಡರು? ನೂರು ದಿನದಲ್ಲಿ ಈ ಸರ್ಕಾರ ಎಷ್ಟು ದಿನ ಕೆಲಸ ಮಾಡಿದೆ ಎಂಬ ಪಟ್ಟಿ ತೆಗೆಯಿರಿ ಎಲ್ಲವನ್ನೂ ಚರ್ಚೆ ಮಡೋಣ ಎಂದು ಹೇಳಿದರು.

