HomeKarnatakaBIG NEWS: ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಚಾಕು ಇರಿದ ಅಸಿಸ್ಟೆಂಟ್

BIG NEWS: ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಚಾಕು ಇರಿದ ಅಸಿಸ್ಟೆಂಟ್

ಚಿಕ್ಕಮಗಳೂರು: ಬುದ್ಧಿ ಮಾತು ಹೇಳಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಅಸಿಸ್ಟೆಂಟ್ ಓರ್ವ ಚಾಕು ಇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಗದೀಶ್ ಕುಮಾರ್ ಹಲ್ಲೆಗೊಳಗಾದ ಅಧಿಕಾರಿ. ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಚಾಕು ಇರಿದ ವ್ಯಕ್ತಿ. ವರ್ಗಾವಣೆ ವಿಚಾರವಾಗಿ ಕೆ.ಎಸ್.ಆರ್.ಟಿ.ಸಿ ಡಿಸಿ ಜಗದೀಶ್ ಕುಮಾರ್, ರಿತೇಶ್ ಹಾಗೂ ಆತನ ಕುಟುಂಬದವರನ್ನು ಕರೆದು ಬಿದ್ಧಿ ಮಾತು ಹೇಳಿದ್ದರಂತೆ. ಇದರಿಂದ ರಿತೇಶ್ ಕೋಪಗೊಂಡಿದ್ದ.

ಜಗದೀಶ್ ಕುಮಾರ್ ಅವರು ವಾಹನ ಹತ್ತುವ ವೇಳೆ ಅವರನ್ನು ಅಡ್ಡಗಟ್ಟಿದ ರಿತೇಶ್, ಏಕಏಕಿ ಚಾಕುವಿನಿಂದ ಇರಿದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಧಿಕಾರಿಯ ಕೈಗೆ ಗಾಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಿತೇಶ್ ಕಚೇರಿ ಹಾಜರಿ ಸರಿಯಿರಲಿಲ್ಲ. ಈ ಕಾರಣಕ್ಕೆ ಕುಟುಂಬದವರನ್ನು ಕರೆದು ಅಧಿಕಾರಿ ತಿಳಿಸಿದ್ದರು. ಅಲ್ಲದೇ ಕುಟುಂಬದವರ ಮನವಿ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ತನಗೆ ಮನೆಯವರ ಮುಂದೆ ಅವಮಾನ ಮಾಡಿದ್ದಾರೆ ಎಂದು ಅಧಿಕಾರಿಗೆ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಗಾಯಾಳು ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯದ ಬಳಿಕ ಆರೋಪಿ ರಿತೇಶ್ ಪರಾರುಯಾಗಿದ್ದಾನೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular