HomeKarnatakaBIG NEWS: ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ; ಕೃಷಿ ಚಟುವಟಿಕೆಗಳಿಗೆ ಇಲ್ಲ: ಜಲ...

BIG NEWS: ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ; ಕೃಷಿ ಚಟುವಟಿಕೆಗಳಿಗೆ ಇಲ್ಲ: ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

ಬೆಂಗಳೂರು: ಬೆಂಗಳೂರು- ಕಾವೇರಿ ಜಲಾನಯನ ತೀರ ಪ್ರದೇಶದ ಅಣೆಕಟ್ಟುಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲಾಗುತ್ತದೆ ಹೊರತು, ಕೃಷಿ ಚಟುವಟಿಕೆಗಳಿಗೆ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಕಾಸ ಸೌಧದಲ್ಲಿ ಕೆಆರ್‌ಎಸ್ ಅಣೆಕಟ್ಟಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದವರು ನೀರಿನ ಸಂಗ್ರಹಣೆ ಲಭ್ಯತೆ ಕುಡಿಯುವ ನೀರಿನ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಕೆಆರ್‌ಎಸ್‌ ಅಣೆಕಟ್ಟು ವ್ಯಾಪ್ತಿಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗಿದೆ ಕಳೆದ ಒಂದು ವಾರದಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅಣೆಕಟ್ಟಿನಲ್ಲಿ ಪ್ರಸ್ತುತ ಲಭ್ಯವಾಗಿರುವ ನೀರಿನ ಪ್ರಮಾಣದ ಆಧಾರದ ಮೇಲೆ ನಮಗೆ ಸದ್ಯಕ್ಕೆ ಕುಡಿಯುವ ಮತ್ತು ಜಾನುವಾರುಗಳಿಗೆ ಮಾತ್ರ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತೇವೆ. ಆದರೆ ಕೃಷಿ ಚಟುವಟಿಕೆಗಳಿಗೆ ಸದ್ಯ ನೀರನ್ನು ನಾಲೆಗೆ ಹರಿಸುವ ಉದ್ದೇಶ ನಮ್ಮ ಮುಂದೆ ಇಲ್ಲ ಎಂದು ಪುನರುಚ್ಚರಿಸಿದರು.

ರೈತರು ನಾಲೆಗಳಿಗೆ ನೀರು ಹರಿಸಬೇಕು ಎಂದು ಜನಪತ್ರಿನಿಧಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒಳಹರಿವು ಮತ್ತು ಹೊರಹರಿವು ಲಭ್ಯತೆಯ ಆಧಾರದ ಮೇಲೆ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರು ಕುಡಿಯುವ ಉದ್ದೇಶಕ್ಕೆ ಎಂದು ಹೇಳಿದರು.

ಮುಂದಿನ ಹದಿನೈದು ದಿನಗಳಲ್ಲಿ ಇದೇ ರೀತಿ ಅಣೆಕಟ್ಟಿಗೆ ನೀರು ಹರಿದು ಬಂದರೆ, ಖಂಡಿತವಾಗಿಯೂ ನಾವು ನಾಲೆಗಳಿಗೆ ನೀರನ್ನು ಹರಿಸುತ್ತೇವೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಇರುವ ಕಾರಣ ನಾವು ಕೂಡ ಏನು ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳನ್ನು ನಡೆಸಲು ನಾಲೆಗಳಿಗೆ ನೀರು ಹರಿಸಬೇಕೆಂದು ಶಾಸಕರು ಕೂಡ ನಮಗೆ ಮನವಿ ಮಾಡಿದ್ದಾರೆ ನಾನು ವಸ್ತುಸ್ಥಿತಿಯನ್ನು ವಿವರಿಸಿದ್ದೇವೆ. ಲಭ್ಯವಿರುವ ನೀರನ್ನು ಬಿಟ್ಟರೆ ಮುಂದೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು

ಇದೇ ತಿಂಗಳ 15ರಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಅಲ್ಲಿ ಏನು ನಡೆಯಲಿ ಎಂಬುದನ್ನು ಕಾದು ನೋಡೋಣ. ಒಂದು ವೇಳೆ ಮುಂದಿನ 15 ದಿನಗಳಲ್ಲಿ ಮಳೆಯಾದರೆ, ನಮಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ .ಆಗ ಯಾವ ಸಮಸ್ಯೆಗೆ ಬರುವುದಿಲ್ಲ ಎಂದು ತಿಳಿಸಿದರು.

ವಾಡಿಕೆಯಂತೆ ನಮಗೆ ಈ ಬಾರಿ ಮಳೆ ಬರುವ ಪ್ರಮಾಣ ಕಡಿಮೆ ಸಾಧ್ಯತೆ ಇದೆ. ಹವಮಾನ ಇಲಾಖೆ ತಜ್ಞರು ಕೂಡ ಇದನ್ನೇ ಹೇಳಿದ್ದಾರೆ.. ಲಭ್ಯವಿರುವ ನೀರನ್ನು ನಾವು ಜೋಪಾನವಾಗಿ ಇಟ್ಟುಕೊಳ್ಳಬೇಕು. ನಾಲೆಗಳಿಗೆ ನೀರು ಹರಿಸುವಂತೆ ಜನಪ್ರತಿನಿಧಿಗಳ ಮೇಲೆ ರೈತರು ಒತ್ತಡ ಹಾಕಬಾರದೆಂದು ಸಲಹೆ ಮಾಡಿದರು.

ಮೇಕೆದಾಟು ನದಿ ನೀರು ಯೋಜನೆ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಇದನ್ನು ಅನುಷ್ಠಾನವ ಮಾಡಲು ಬದ್ಧವಾಗಿದೆ. ತಮಿಳುನಾಡು ಸರ್ಕಾರ ಈ ಯೋಜನೆಗೆ ಯಾವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂಬುದು ನಮಗೆ ಗೊತ್ತಿಲ್ಲ .ಯೋಜನೆ ಸ್ಥಾನದಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಉಭಯ ರಾಜ್ಯಗಳಿಗೆ ಇದು ಅನುಕೂಲವಾಗಲಿದೆ. ನೆರೆಯ ರಾಜ ಹಠಮಾರಿ ಧೋರಣೆ ಬಿಟ್ಟು ಸಹಕಾರ ನೀಡಲಿ ಎಂದು ಮನವಿ ಮಾಡಿದರು.

ಯೋಜನೆ ಅನುಷ್ಠಾನದ ವೇಳೆ ಭೂಮಿ ಮುಳುಗಡೆಯಾದರೆ ಅಂತಹ ರೈತರಿಗೆ ನಾವು ಪರ್ಯಾಯವಾಗಿ ಭೂಮಿ ಇಲ್ಲವೇ ಹಣಕಾಸಿನ ನೆರವು ನೀಡಬೇಕು. ಅರಣ್ಯ ಭೂಮಿ ಇರಲಿ ಇಲ್ಲವೇ ಕೃಷಿ ಜಮೀನೇ ಇರಲಿ, ಮುಳುಗಡೆಯಾಗುವ ಭೂಮಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತದೆ ರೈತರಿಗೆ ಸರ್ಕಾರ ಅಗತ್ಯವಾದ ನೆರವು ನೀಡಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಆಭಯ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular