HomeKarnataka'KPSC' ಪರೀಕ್ಷಾ ಅಕ್ರಮ : ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಗಂಭೀರ ಆರೋಪ

‘KPSC’ ಪರೀಕ್ಷಾ ಅಕ್ರಮ : ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಗಂಭೀರ ಆರೋಪ

ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ಆರೋಪ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ಅಕ್ರಮದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಈ ವಿಚಾರದಲ್ಲಿ ಸರ್ಕಾರದ ನಡೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, “ಅಕ್ರಮದ ಕಿಂಗ್‌ಪಿನ್‌ಗಳಿಗೆ ಸಿಹಿ ಊಟ, ಕಷ್ಟಪಟ್ಟು ಓದಿದ ನಾಡಿನ ಯುವಜನತೆಗೆ ಕಣ್ಣೀರು” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ಮಧ್ಯವರ್ತಿ ಎಂದು ಆರೋಪಿಸಲಾಗಿರುವ ಬಸವರಾಜ್ ಕನ್ನಾಳೆ ಅವರಿಗೆ ಸಚಿವ ಈಶ್ವರ್ ಖಂಡ್ರೆ ಅವರು ಸಿಹಿ ತಿನ್ನಿಸುವ ಕುರಿತು ಪ್ರಶ್ನಿಸಿರುವ ಜೆಡಿಎಸ್, “ಅವರು ಇಷ್ಟೊಂದು ಪ್ರೀತಿಯಿಂದ ಸಿಹಿ ತಿನ್ನಿಸುವಷ್ಟು ‘ಮಧುರ ಬಾಂಧವ್ಯ’ವೇನು?” ಎಂದು ಪ್ರಶ್ನಿಸಿದೆ.

ಅಲ್ಲದೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಜಾಲ ಸರ್ಕಾರದ ಸಚಿವರ ಮನೆ ಬಾಗಿಲಿಗೆ ತಲುಪಿದ್ದರೂ ಕಾಂಗ್ರೆಸ್ ಸರ್ಕಾರ ಮೌನವಾಗಿರುವುದೇಕೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೆಡಿಎಸ್ ಪ್ರಶ್ನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್ ಟ್ವೀಟ್

ಅಕ್ರಮದ ಕಿಂಗ್‌ಪಿನ್‌ಗಳಿಗೆ ಸಿಹಿ ಊಟ, ಕಷ್ಟಪಟ್ಟು ಓದಿದ ನಾಡಿನ ಯುವಜನತೆಗೆ ಕಣ್ಣೀರು! ​#KPSC ಪರೀಕ್ಷಾ ಅಕ್ರಮದ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ

@eshwar_khandreಅವರು ಇಷ್ಟೊಂದು ಪ್ರೀತಿಯಿಂದ ಸಿಹಿ ತಿನ್ನಿಸುವಷ್ಟು “ಮಧುರ ಬಾಂಧವ್ಯ”ವೇನು ?

@DKShivakumarಅವರೇ,  ಕೆಪಿಎಸ್’ಸಿ ನೇಮಕಾತಿ ಅಕ್ರಮದ ಜಾಲ ಸರ್ಕಾರದ ಸಚಿವರ ಮನೆ ಬಾಗಿಲಿಗೆ ತಲುಪಿದ್ದರೂ

@INCKarnatakaಸರ್ಕಾರ ಮೌನವಾಗಿರುವುದು ಏಕೆ?  ಸದಾ ಸಾಮಾಜಿಕ ನ್ಯಾಯದ ಬಗ್ಗೆ ಟ್ವೀಟ್ ಮಾಡುವ ಸಚಿವ

@PriyankKhargeಅವರೇ, ಈ ಅಕ್ರಮದಲ್ಲಿ ಸಚಿವರ ಮತ್ತು ನಿಮ್ಮ ಪರ್ಸಂಟೇ ಜ್ ಸರ್ಕಾರದ ಪಾತ್ರವೇನು? ಎಂಬುದನ್ನು ಮೊದಲು ರಾಜ್ಯದ ನಿರುದ್ಯೋಗಿ ಯುವಜನತೆಗೆ ಸ್ಪಷ್ಟಪಡಿಸಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

 ಮತ್ತೊಂದು ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದ ಜೆಡಿಎಸ್    ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ ದಂಧೆ ಸ್ವಪಕ್ಷದ ಶಾಸಕರಿಂದಲೇ ಬಟಾ ಬಯಲು! “ಕೆಲಸಕ್ಕೆ 4%, ಬಿಲ್ ಪಾಸ್‌ಗೆ 7% ಕಮಿಷನ್ ನೀಡಬೇಕು; ಸಚಿವರ ಹೆಸರಿನಲ್ಲಿ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ” ಎಂದು ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರೇ

@DKShivakumarಅವರಿಗೆ ಪತ್ರ ಬರೆದಿದ್ದಾರೆ. ಹಿಂದೆ ಸುಳ್ಳು ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ

@INCKarnatakaಸರ್ಕಾರದ ಅಸಲಿ ಬಣ್ಣ ಈಗ ಜಗಜ್ಜಾಹೀರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಹಣ ಬಿಡುಗಡೆಗೆ ಸಚಿವರ ಹೆಸರಿನಲ್ಲಿ ಶೇಕಡಾವಾರು ಕಮಿಷನ್ ಲೂಟಿ ನಡೆಯುತ್ತಿದೆ ಎಂದು ಶಾಸಕ ಅಶೋಕ್ ರೈ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ರಾಜ್ಯದ ಜನತೆಗೆ ಉತ್ತರಿಸಿ. ಈ ಕಮಿಷನ್ ದಂಧೆಯ ನೇರ ಫಲಾನುಭವಿಗಳು ಯಾರು? ಸಚಿವರ ಕುಮ್ಮಕ್ಕಿಲ್ಲದೆ ಅಧಿಕಾರಿಗಳು ಇಂತಹ ಸುಲಿಗೆ ಮಾಡಲು ಸಾಧ್ಯವೇ? ಮುಖ್ಯಮಂತ್ರಿಗಳು ಕೂಡಲೇ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆ ಪಡೆದು, ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular