ಒರಟ ಶ್ರೀ ನಿರ್ದೇಶನದ ಸುನಾಮಿ ಕಿಟ್ಟಿ ಅಭಿನಯದ ಬಹು ನಿರೀಕ್ಷಿತ ‘ಕೋರ’ ಚಿತ್ರ ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ಇದರ ಟ್ರೈಲರ್ ಇದೆ ಜನವರಿ 7ಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ರತ್ನಮ್ಮ ಮೂವೀಸ್ ಬ್ಯಾನರ್ ನಲ್ಲಿ ಪಿ ಮೂರ್ತಿ ನಿರ್ಮಾಣ ಮಾಡಿದ್ದು, ಸುನಾಮಿ ಕಿಟ್ಟಿ ಸೇರಿದಂತೆ ಚರಿಷ್ಮಾ, ಪಿ ಮೂರ್ತಿ, ಹಾಗೂ ಎಮ್ ಕೆ ಮಠ ತೆರೆ ಹಂಚಿಕೊಂಡಿದ್ದಾರೆ. ಹೇಮಂತ್ ಕುಮಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಕೆ ಗಿರೀಶ್ ಕುಮಾರ್ ಸಂಕಲನ, ಸೆಲ್ವಂ ಮಾತಪ್ಪನ್ ಛಾಯಾಗ್ರಹಣ, ಜಿನೇಂದ್ರ ಕಲಾ ನಿರ್ದೇಶನ, ಹಾಗೂ ಕೋರ ಚಿನ್ನಯ್ಯ ಅವರ ಸಾಹಸ ನಿರ್ದೇಶನವಿದೆ.
View this post on Instagram

