ಕೊಪ್ಪಳ: ಹುಬ್ಬಳ್ಳಿಯಲ್ಲಿ ನಡೆದಿದ್ದ ಎರಡು ಲವ್ ಜಿಹಾದ್ ಪ್ರಕರಣಗಳು ಭಾರಿ ಚರ್ಚೆಗೆ ಕಾರಣವಗಿರುವ ನಡುವೆಯೇ ಕೊಪ್ಪಳದಲ್ಲಿಯೂ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅನ್ಯಕೋಮಿನ ಯುವಕ ಮುಸ್ತಫಾ ಪುಸಲಾಯಿಸಿ ಕರೆದೊಯ್ದಿದ್ದು, ವಿದ್ಯಾರ್ಥಿನಿ ಜೊತೆಗಿದ್ದ ವೇಳೆ ಹಿಂದೂ ಯುವಕರ ಕೈಗೆ ಸಿಕ್ಕಿಬಿದ್ದಿದ್ದ. ಆತನ ಮೊಬೈಲ್ ಪರಿಶೀಲಿಸಿದಾಗ ಯುವತಿಯರ ಜೊತೆಗಿರುವ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿಂದೂ ವಿದ್ಯಾರ್ಥಿನಿ ಕೊಪ್ಪಳದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಆಕೆಯೊಂದಿಗೆ ಸ್ನೇಹ ಬೆಳೆಸಿದ ಕಂಪ್ಲಿ ಗ್ರಾಮದ ಯುವಕ ಮುಸ್ತಫಾ ವಿರುದ್ಧ ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ಜೊತೆಗೆ ಇದ್ದ ವೇಳೆ ಹಿಂದೂ ಯುವಕರ ಕೈಗೆ ಮುಸ್ತಫಾ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಮುಸ್ತಫಾ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ಹಿಂದೂ ಯವತಿಯರ ಜೊತೆಗಿರುವ ಫೋಟೋಗಳು ಸೇರಿದಂತೆ 10ಕ್ಕೂ ಹೆಚ್ಚು ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಲ್ಲದೆ ಯುವತಿಯರಿಗೆ ಬಿಯರ್ ಕುಡಿಸಿದ್ದಾನೆ. ಮಟ್ಕಾ ಬರೆಯುತ್ತಿರುವುದೂ ಪತ್ತೆ ಆಗಿದೆ. ಈ ವೇಳೆ ಕೂಡಲೇ ಮೊಬೈಲ್ ಕಸಿದುಕೊಂಡ ಮುಸ್ತಫಾ ರೀಸೆಟ್ ಮಾಡಿದ್ದಾನೆ.
ನಾನು ಹಿಂದೂ ಯುವತಿಯನ್ನು ಮದುವೆ ಆಗಿರುವುದಾಗಿ ಮುಸ್ತಫಾ ಹೇಳುತ್ತಿದ್ದಾನೆ. ಆದರೆ ಇತ್ತ ಮುಸ್ತಫಾ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಯುವಕರು ಆಗ್ರಹಿಸಿದ್ದಾರೆ.
ಕೊಪ್ಪಳ ನಗರ ಠಾಣೆ ಬಳಿ ಜಮಾವಣೆಗೊಂಡಿರುವ ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಸಂಗಮೇಶ್ ಹಿರೇಮಠ ಹಾಗೂ ಹಿಂದೂ ಕಾರ್ಯಕರ್ತರು ಮುಸ್ತಫಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಪಿಗೆ ದೂರು ನೀಡಿದ್ದಾರೆ.

