HomeIndiaಮಹಾರಾಷ್ಟ್ರದ ಹಿಂಗೋಲಿ, ನಾದೇಂಡ್ ನಲ್ಲಿ ಭೂಕಂಪ

ಮಹಾರಾಷ್ಟ್ರದ ಹಿಂಗೋಲಿ, ನಾದೇಂಡ್ ನಲ್ಲಿ ಭೂಕಂಪ

ಮುಂಬೈ: ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದ ಹಿಂಗೋಲಿ ಜಿಲ್ಲೆಯ ಕೆಲವೆಡೆ ಭೂಕಂಪ ಸಂಭವಿಸಿದೆ. ಹಿಂಗೋಲಿ , ನಾಂದೇಡ್ ಹಾಗೂ ಪರ್ಭಾನಿ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಹಿಂಗೋಲಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ 4.7 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭೂಕಂಪದಿಂದಾಗಿ ಪಾಂಗ್ರ ಶಿಂಧೆ ಗ್ರಾಮದ ಕೆಲವು ಮನೆಗಳು ಹಾಗೂ ಸಮುದಾಯ ಭವನಗಳಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹಂಗೋಲಿ ಜಿಲ್ಲಾಧಿಕಾರಿ ರಾಹುಲ್ ಗುಪ್ತಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಬೆಳಿಗ್ಗೆ 8:30ರ ವೇಳೆಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.7 ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಹಿಂಗೋಲಿ ಜಿಲ್ಲೆಯ ವಸ್ಮತ್ ತಾಲೂಕಿನ ಶಿರ್ಲಿ ಗ್ರಾಮದ 10 ಕಿ.ಮೀ ಆಳದಲ್ಲಿ ಕೇಂದ್ರೀಕ್ರ‍ಿತವಾಗಿತ್ತು.

ಇನ್ನು ನಾಂದೇಡ್ ನಗರ, ಅರ್ಧಾಪುರ್, ಹದ್ಗಾಂವ್, ಹಿಮಾಯತ್ ನಗರ ಹಾಗೂ ಪರ್ಭಾನಿ ಜಿಲ್ಲೆಯ ಕೆಲ ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular