HomeIndiaVideo | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

Video | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಫುಡ್ ಫ್ಯೂಶನ್‌ನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ದೇಶದ ವಿವಿಧ ಭಾಗಗಳ ರಸ್ತೆ ಬದಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳವರೆಗೂ ಬಾಣಸಿಗರು ತಯಾರಿಸುವ ವಿಶಿಷ್ಟವಾದ ಖಾದ್ಯಗಳ ಕುರಿತು ಫುಡ್ ವ್ಲಾಗರ್‌ಗಳು ವರದಿ ಮಾಡುತ್ತಲೇ ಇರುತ್ತಾರೆ.

ಕೋಲ್ಕತ್ತಾದ ಜನಪ್ರಿಯ ಬೀದಿಬದಿ ತಿನಿಸಾದ ಫುಚ್ಕಾ (ಗೋಲ್ಗಪ್ಪಾ ಅಥವಾ ಪಾನಿಪೂರಿ) ತಿನ್ನಲು ಈ ಊರಿಗೆ ಬರುವ ಪ್ರವಾಸಿಗರು ಇಷ್ಟ ಪಡುತ್ತಾರೆ. ಇದೀಗ ಈ ಫುಚ್ಕಾಗೂ ಹೊಸ ಬಗೆಯ ಫ್ಯೂಶನ್ ಮಾಡುವ ಮೂಲಕ ಬೀದಿ ಬದಿಯ ಚಾಟ್ ವರ್ತಕರೊಬ್ಬರು ಸುದ್ದಿಯಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗರದ ವಿವೇಕಾನಂದ ಪಾರ್ಕ್‌ನ ದಿಲೀಪ್ ಎಂಬ ಬೀದಿ ಬದಿ ವರ್ತಕರೊಬ್ಬರು ಫುಚ್ಕಾದೊಂದಿಗೆ ತಂಪು ಪಾನೀಯ ಥಂಬ್ಸ್‌ ಅಪ್‌  ಅನ್ನು ಫ್ಯೂಶನ್ ಮಾಡಿದ್ದಾರೆ. ಫುಚ್ಕಾ ಪೂರಿಯೊಳಗೆ ಹಾಕುವ ಫಿಲ್ಲಿಂಗ್‌ನೊಂದಿಗೆ ಜಲ್‌ಜೀರಾ ಜೊತೆಗೆ ಥಂಬ್ಸ್‌ಅಪ್‌ ಬೆರೆಸಿ ಹಾಕಿ ಕೊಡುವುದೇ ಈ ಫ್ಯೂಶನ್‌ನ ಸಾರ. ತಿಂಡಿಪೋತ ನೆಟ್ಟಿಗರು ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ

For Latest News Updates, Join Our Whatsapp Community🚩
RELATED ARTICLES

Most Popular