ಕೋಲಾರ: ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ಕೋಲಾರ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾಣೆಯಾಯಿ ನಾಲ್ಕು ದಿನಗಳು ಕಳೆದರೂ ಸುಳಿವು ಸಿಗದಿರುವುದು ಕುಟುಂಬದವರಲ್ಲಿ ಆತಂಕ ಮೂಡಿಸಿದೆ.
ಕೋಲಾರದ ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ರವಿ (40) ನಾಪತ್ತೆಯಾಗಿರುವವರು. ಶಬರಿಮಲೆ ಪ್ರವಾಸಕ್ಕೆಂದು ಹೋಗಿದ್ದ ರವಿ, ಅಲ್ಲಿಂದ ತಮಿಳುನಾಡಿನ ತಿರುಚಂದೂರ್ ಗೆ ತೆರಳಿದ್ದರು. ತಿರುಚಂದೂರ್ ಗೆ ಹೋಗಿದ್ದವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ರವಿ ಅವರ ಸುಳಿವು ಸಿಗುತ್ತಿಲ್ಲ. ಇದರಿಂದ ಆತಂಕಗೊಂಡಿರುವ ಕುಟುಂಬ ತಿರುಚಂದೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ನಾಪತ್ತೆಯಾಗಿರುವ ರವಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

