HomeKarnatakaBIG NEWS: ಕೊಡಗಿನಲ್ಲಿ ಯುವಕನಿಂದ ರಾಜಕಾರಣಿಗಳ ಪುತ್ರಿಯರು ಸೇರಿ ಯುವತಿಯರೊಂದಿಗೆ ರಾಸಲೀಲೆ: ವಿಡಿಯೋ ವೈರಲ್: ಆರೋಪಿ...

BIG NEWS: ಕೊಡಗಿನಲ್ಲಿ ಯುವಕನಿಂದ ರಾಜಕಾರಣಿಗಳ ಪುತ್ರಿಯರು ಸೇರಿ ಯುವತಿಯರೊಂದಿಗೆ ರಾಸಲೀಲೆ: ವಿಡಿಯೋ ವೈರಲ್: ಆರೋಪಿ ಅರೆಸ್ಟ್

ಕೊಡಗು: ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕೊಡಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೊಡಗಿನ ರಾಸಲೀಲೆ ಪ್ರಜರಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಯುವತಿಯರೊಂದಿಗೆ ಕಾಮಕೇಳಿ ನಡೆಸುತ್ತಿದ್ದು ರಾಸಲೀಲೆ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಮೊಹಮ್ಮದ್ ಸವದ್, ರಾಜಕಾರಣಿಗಳ ಪುತ್ರಿಯರು, ಹಲವು ಯುವತಿಯರನ್ನು ಕರೆದೊಯ್ದು ರಾಸಲೀಲೆ ನಡೆಸುತ್ತಿದ್ದು, ಕೃತ್ಯದ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದ. ರಾಸಲೀಲೆ ವಿಡಿಯೋವನ್ನು ತನ್ನದೇ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿನ ಕೆಲ ಯುವತಿಯರು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದಾರೆ. ಕೆಲವರು ಜಿಲ್ಲಾ ಮಟ್ಟಡ ರಾಜಕೀಯ ಪಕ್ಷದ ಮುಖಂಡರ ಪುತ್ರಿಯರು ಇದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೊಹಮ್ಮದ್ ಸನದ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular