ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುರಂತವೊಂದು ಸಂಭವಿಸಿದೆ. ಗೇಟ್ ಮುರಿದು ಬಿದ್ದು ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿರುವ ದಾರುಣ ಘಟನೆ ಬಾಗಲಗುಂಟೆ ಬಳಿ ನಡೆದಿದೆ.
ವಾಯುವ್ಯ ವಿಭಾಗದ ಬಾಗಲಗುಂಟೆ ಬಳಿ ಈ ದುರಂತ ಸಂಭವಿಸಿದೆ. ಸ್ವಾಮಿ (55) ಮೃತ ದುರ್ದೈವಿ. ಖಾಸಗಿ ಬಿಲ್ಡಿಂಗ್ ಬಳಿ ಗೇಟ್ ಕೆಲಸಕ್ಕೆಂದು ಸ್ವಾಮಿ ನಿಯೋಜನೆಗೊಂಡಿದ್ದರು. ಗೂಡ್ಸ್ ವೆಹಿಕಲ್ ಬಂದಿದ್ದ ವೇಳೆ ಗೇಟ್ ಓಪನ್ ಮಾಡಿದ್ದಾರೆ. ಈ ವೇಳೆ ಸ್ಲೈದಿಂಗ್ ಗೇಟ್ ಮುರಿದು ಬಿದ್ದು, ಗೇಟ್ ಅಡಿ ಸಿಲುಕಿದ್ದಾರೆ.
ಸ್ಲೈಡಿಂಗ್ ಗೇಟ್ ತೆರೆಯುತ್ತಿದ್ದಂತೆ ಸ್ವಾಮಿ ಮೇಲೆಯೇ ಗೇಟ್ ಮುರಿದು ಬಿದ್ದಿದೆ. ಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

