HomeIPL 2026ಎಷ್ಟೇ ಬೇಡಿಕೊಂಡರೂ ಕ್ಯಾರೆ ಎನ್ನದೇ ಹೋದ ಕೊಹ್ಲಿ: ಆಟೋಗ್ರಾಫ್ ಸಿಗದೇ ಬ್ಯಾಟ್ ಎಸೆದು ಗಳಗಳನೆ ಕಣ್ಣೀರಿಟ್ಟ...

ಎಷ್ಟೇ ಬೇಡಿಕೊಂಡರೂ ಕ್ಯಾರೆ ಎನ್ನದೇ ಹೋದ ಕೊಹ್ಲಿ: ಆಟೋಗ್ರಾಫ್ ಸಿಗದೇ ಬ್ಯಾಟ್ ಎಸೆದು ಗಳಗಳನೆ ಕಣ್ಣೀರಿಟ್ಟ ಪುಟ್ಟ ಬಾಲಕ; ವಿಡಿಯೊ

ಭಾರತದಲ್ಲಿ ಸಿನಿಮಾ ನಟರು ಹಾಗೂ ಕ್ರಿಕೆಟ್ ಆಟಗಾರರೆಂದರೆ ಎಲ್ಲಿಲ್ಲದ ಹುಚ್ಚು ಪ್ರೀತಿ. ಇಷ್ಟದ ನಟ ಅಥವಾ ಆಟಗಾರರನ್ನು ಭೇಟಿಯಾಗಿ ಅವರ ಫೋಟೊ ತೆಗೆಸಿಕೊಳ್ಳುವುದು ಹಾಗೂ ಆಟೋಗ್ರಾಫ್ ಪಡೆದುಕೊಳ್ಳುವುದು ಒಂದು ರೀತಿಯ ಕ್ರೇಜಿ ಹವ್ಯಾಸ.

ಕೆಲವರು ಇದನ್ನು ಒಮ್ಮೆ ಮಾಡಿ ಒಂದೊಳ್ಳೆ ನೆನಪು ಎಂದು ಜೊತೆಯಲ್ಲಿಟ್ಟುಕೊಂಡರೆ ಇನ್ನೂ ಕೆಲವರು ಅನೇಕ ಬಾರಿ ಫೋಟೊ, ಆಟೋಗ್ರಾಫ್ ಪಡೆದುಕೊಳ್ಳುವ ಹುಚ್ಚು ಅಭಿಮಾನ ಹೊಂದಿರುತ್ತಾರೆ.

ಇದು ಕೆಲವೊಮ್ಮೆ ಸೆಲೆಬ್ರಿಟಿಗಳಿಗೂ ಸಹ ಅತಿರೇಕವೆನಿಸಿ ಕಡೆಗಣಿಸಲು ಆರಂಭಿಸಿಬಿಡುತ್ತಾರೆ. ಇದರಿಂದ ಅಭಿಮಾನಿಗಳು ಬೇಸರಕ್ಕೊಳಗಾಗಿ ಕಣ್ಣೀರು ಹಾಕಿರುವ ಅನೇಕ ಘಟನೆಗಳನ್ನು ನಾವೆಲ್ಲ ನೋಡಿದ್ದೇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪುಟ್ಟ ಬಾಲಕ ವಿರಾಟ್ ಕೊಹ್ಲಿಯ ಆಟೋಗ್ರಾಫ್ ಸಿಗದ ಕಾರಣ ನೆಲಕ್ಕೆ ಬ್ಯಾಟ್ ಎಸೆದು ಗೋಳಿಟ್ಟಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆ ಬಾಲಕ ಹೊಟೇಲ್‌ವೊಂದರಲ್ಲಿ ಬ್ಯಾಟ್‌ಗೆ ಕೊಹ್ಲಿ ಸಹಿ ಪಡೆದುಕೊಳ್ಳಲು ಮುಂದಾಗಿ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ತೆರಳಿದ ಕೊಹ್ಲಿ ಕಡೆಗಣಿಸಿದ್ದಾರೆ.

ಇತ್ತ ಹತಾಶನಾದ ಬಾಲಕ ಬ್ಯಾಟ್ ಬಿಸಾಡಿ ಕಿರುಚಿ ಕಣ್ಣೀರಿಟ್ಟಿದ್ದಾನೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular