‘ಜೋಗಿ’ ಪ್ರೇಮ್ ನಿರ್ದೇಶನದ ಬಹು ತಾರಾಗಣದ ‘ಕೆಡಿ -ದಿ ಡೆವಿಲ್’ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕಾಲಭೈರವನಾಗಿ ಕಾಣಿಸಿಕೊಂಡಿದ್ದಾರೆ. ಕಾಶಿಯ ಹಿನ್ನೆಲೆಯಲ್ಲಿ ನಿಂತಿರುವ ಸುದೀಪ್ ಪಾತ್ರವೇ ಸಿನಿಮಾದಲ್ಲಿ ನಿರ್ಣಾಯಕ ಎಂದು ಹೇಳಲಾಗಿದೆ.
ರಾಮನವಮಿ ಸಂದರ್ಭದಲ್ಲಿ ಸುದೀಪ್ ಮಾಸ್ ಪಾತ್ರದ ಫಸ್ಟ್ ಲುಕ್ ರಿವಿಲ್ ಮಾಡಲಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅವರ ಪಾತ್ರ ಬರಲಿದ್ದು, ಕೆಡಿ ಚಿತ್ರದ ಸೀಕ್ವೆಲ್ ಕತೆಗೆ ಪೂರಕವಾಗಿರುತ್ತದೆ ಎನ್ನಲಾಗಿದೆ.
ಧ್ರುವ ಸರ್ಜಾ ಕೆಡಿ ಅಲಿಯಾಸ್ ಕಾಳಿದಾಸನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೋರಾ ಫತೇಹಿ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿದ್ದು, ಇದೀಗ ಸುದೀಪ್ ಪಾತ್ರ ರಿವಿಲ್ ಆಗಿದೆ.
‘ದಿ ವಿಲನ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಸುದೀಪ್ ನಟಿಸಿದ್ದರು. ಪ್ರೇಮ್ ನಿರ್ದೇಶನದ ‘ದಿ ವಿಲನ್’ ಬಳಿಕ ಸುದೀಪ್ ಮತ್ತು ಪ್ರೇಮ್ ಚಿತ್ರಕ್ಕಾಗಿ ಜನ ಕಾಯುತಿದ್ದರು. ಇದೀಗ ‘ಕೆಡಿ’ ಸಿನಿಮಾದಲ್ಲಿ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಅಭಿನಯಿಸಿದ್ದಾರೆ.

