ಬಹುಭಾಷಾ ನಟ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ತಮಿಳುನಾಡಿನಲ್ಲಿ ಸುದೀಪ್ ಅವರಿಗೆ ಗುಡಿ ಕಟ್ಟಿ ಅಭಿಮಾನಿಯೊಬ್ಬರು ಪೂಜೆ ಸಲ್ಲಿಸುತ್ತಿದ್ದಾರೆ.
ಚಾಮರಾಜನಗರ ಗಡಿ ಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡಗಾಜನೂರಿನಲ್ಲಿ ಅವರ ಅಭಿಮಾನಿ ಸಿದ್ದರಾಜು ಸಣ್ಣ ಗುಡಿ ಕಟ್ಟಿದ್ದಾರೆ. ಅಲ್ಲಿ ಮಹರ್ಷಿ ವಾಲ್ಮೀಕಿ, ವೀರಮದಕರಿ ನಾಯಕ ಮತ್ತು ನಟ ಸುದೀಪ್ ಅವರ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.
ಸುದೀಪ್ ಅಭಿಮಾನಿಯಾಗಿರುವ 28 ವರ್ಷದ ಸಿದ್ದರಾಜು ಅವರನ್ನು ಕಿಚ್ಚ ಸಿದ್ದರಾಜು ಎಂದು ಕರೆಯುತ್ತಾರೆ. ಐಸ್ ಕ್ಯಾಂಡಿ ಮಾರುವ ಸಿದ್ದರಾಜು ಅವರು ಸುದೀಪ್ ಮೇಲಿನ ಅಭಿಮಾನದಿಂದ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ.

