HomeKarnatakaBIG NEWS: ಕೆಇಎ ಪರೀಕ್ಷಾ ಅಕ್ರಮ; ಆರ್.ಡಿ.ಪಾಟೀಲ್ ಗೆ ರಕ್ಷಣೆ ನೀಡಿದ್ದ ಫ್ಲಾಟ್ ಮಾಲೀಕ, ಮ್ಯಾನೇಜರ್...

BIG NEWS: ಕೆಇಎ ಪರೀಕ್ಷಾ ಅಕ್ರಮ; ಆರ್.ಡಿ.ಪಾಟೀಲ್ ಗೆ ರಕ್ಷಣೆ ನೀಡಿದ್ದ ಫ್ಲಾಟ್ ಮಾಲೀಕ, ಮ್ಯಾನೇಜರ್ ಅರೆಸ್ಟ್

ಕಲಬುರ್ಗಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಈ ನಡುವೆ ಆತ ಕಾಂಪೌಂಡ್ ಹಾರಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಗೆ ರಕ್ಷಣೆ ನೀಡಿದ್ದ ಆರೋಪದಲ್ಲಿ ಫ್ಲಾಟ್ ಮಾಲೀಕ ಹಾಗೂ ಮ್ಯಾನೇಜರ್ ಇಬ್ಬರನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಬುರ್ಗಿಯ ವರದಾ ಲೇಔಟ್ ನಲ್ಲಿರುವ ಮಹಾಲಕ್ಷ್ಮೀ ಅಪಾರ್ಟ್ ಮೆಂಟ್ ನಲ್ಲಿದ್ದ ಆರ್.ಡಿ.ಪಾಟೀಲ್, ನ.6ರಂದು ಪೊಲೀಸರು ದಾಳಿ ನಡೆಸಿದ್ದ ವೇಳೆ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಆತನಿಗೆ ಫ್ಲಾಟ್ ಬಾಡಿಗೆ ನೀಡಿದ್ದ ಕಾರಣಕ್ಕೆ ಮಾಲೀಕ ಹಾಗೂ ಅಪಾರ್ಟ್ ಮೆಂಟ್ ಮ್ಯಾನೇಜರ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಹಾಪುರದ ಶಂಕರ ಗೌಡಯಾಳವಾರ್ ಹಾಗೂ ದಿಲೀಪ್ ಪವಾರ್ ಬಂಧಿತರು ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular