ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಒಂದು ದಿನ ಮೊಟಕುಗೊಳ್ಳಲಿದೆ. ಮಾರ್ಚ್ 26ರಂದು ವಿಧಾನಮಂಡಲ ಅಧಿವೇಶನ ಕೊನೆಗೊಳ್ಳಲಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಉಪ ಚುನಾವಣೆ, ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಮೊಟಕುಗೊಳಿಸಲಾಗುತ್ತಿದೆ.
ಮಾರ್ಚ್ 6ರಿಂದ ಆರಂಭವಾಗಿದ್ದ ರಾಜ್ಯ ಬಜೆಟ್ ಅಧಿವೇಶನ ಮಾ ರ್ಚ್ 27ರವರೆಗೆ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 26ರಂದೇ ಅದಿವೇಶನ ಮುಕ್ತಾಯವಾಗಲಿದೆ.

