HomeKarnatakaಮದುವೆ ಮುಂದೂಡಲು ಕಾರಣವಾಯ್ತು ವಧುವಿನ ʼಮೇಕಪ್ʼ

ಮದುವೆ ಮುಂದೂಡಲು ಕಾರಣವಾಯ್ತು ವಧುವಿನ ʼಮೇಕಪ್ʼ

ಮದುವೆಯಲ್ಲಿ ಸುಂದರವಾಗಿ ಕಾಣಬೇಕೆಂದು ವಧು ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಸಾಮಾನ್ಯ. ಆದ್ರೆ ಬ್ಯೂಟಿ‌ ಪಾರ್ಲರ್ ನಲ್ಲಾದ ಯಡವಟ್ಟಿನಿಂದಾಗಿ ಮದುವೆಯೇ ಮುಂದೂಡಿಕೆಯಾಗಿರೋ ಯಡವಟ್ಟು ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಈ ಘಟನೆ ವರದಿಯಾಗಿದ್ದು, ವಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದುವೆಗೂ ಮುನ್ನ ವಧು ಸುಂದರವಾಗಿ ಕಾಣಲೆಂದು ಸ್ಥಳೀಯ ಬ್ಯೂಟಿ ಪಾರ್ಲರ್ ನಲ್ಲಿ ಫೇಷಿಯಲ್ ಮಾಡಿಸಿಕೊಂಡಿದ್ದಾರೆ. ಆದರೆ ಆ ನಂತರ ಆಕೆಯ ಮುಖ ಕಪ್ಪು ಬಣ್ಣಕ್ಕೆ ತಿರುಗಿದೆ. ಫೇಷಿಯಲ್ ವೇಳೆ ಬಳಸಿದ ಕೆಮಿಕಲ್ಸ್ ನಿಂದ ವಧುವಿನ ಮುಖ ಹಾಳಾಗಿರೋದು ಗೊತ್ತಾಗಿದೆ.

ಆಕೆಯ ಸ್ಥಿತಿಯನ್ನು ನೋಡಿದ ವರನ ಕುಟುಂಬ ಮದುವೆಯನ್ನು ಮುಂದೂಡಿದೆ ಎನ್ನಲಾಗಿದೆ. ವಧುವಿನ ಕುಟುಂಬದವರು ಬ್ಯೂಟಿ ಪಾರ್ಲರ್ ಮಾಲೀಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular