ಕರೂರು: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಭದ್ರತೆಗೆ ತೆರಳಿದ್ದ ಕರ್ನಾಟಕದ ಹೋಂಗಾರ್ಡ್ ಗಳ ಜೊತೆಗೆ ಕಿರಿಕ್ ಮಾಡಲಾಗಿದೆ. ರಾಜಕೀಯ ಮುಖಂಡರು ಹೋಂಗಾರ್ಡ್ ಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
ಖಾಕಿ ಯೂನಿಫಾರಂ ಜೊತೆಗೆ ವಿಜಿಲ್ ಹಾಕಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಿಲ್ ವಿಜಯ್ ಟಿವಿಕೆ ಪಕ್ಷದ ಚಿಹ್ನೆಯಾಗಿದ್ದು, ಅದನ್ನು ಯಾಕೆ ಹಾಕಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ತಮಿಳುನಾಡಿನ ಕರೂರು ಜಿಲ್ಲೆಯ ಕೋಲಕುಲಂ ಬೂತ್ ನಲ್ಲಿ ಘಟನೆ ನಡೆದಿದೆ.
ಕೋಲಕುಲಮ್ ಬೂತ್ ನಂಬರ್ 145, 146 ರಲ್ಲಿ ಕರ್ನಾಟಕದ ಹೋಂ ಗಾರ್ಡ್ ಗೆ ಪ್ರಶ್ನಿಸಿದ್ದು, ನಮ್ಮಲ್ಲಿ ಸಮವಸ್ತ್ರದ ಜೊತೆಗೆ ವಿಜಿಲ್ ಹಾಕಿಕೊಳ್ಳುತ್ತೇವೆ ಎಂದು ಹೋಂ ಗಾರ್ಡ್ ಉತ್ತರ ನೀಡಿದ್ದಾರೆ. ಆದರೆ ಇಲ್ಲಿ ಯಾಖೆ ಹಾಕಿಕೊಂಡಿದ್ದೀಯಾ ಎಂದು ಮುಖಂಡರು ಕಿರಿಕ್ ಮಾಡಿದ್ದಾರೆ.
ವಿಜಿಲ್ ಜೊತೆಗೆ ಬೇರೆ ಅಭ್ಯರ್ಥಿಗಳಿಗೆ ಸಿಸಿಟಿವಿ, ಸೂರ್ಯ, ಎಲೆ ಗುರುತು ಇದೆ. ಸೂರ್ಯ ಕಣ್ಣಿಗೆ ಕಾಣುತ್ತಾನೆ. ಸಿಸಿಟಿವಿ ಇಲ್ಲೇ ಇದೆ. ಎಲೆ ಸುತ್ತಲಿನ ಮರಗಳಲ್ಲಿದೆ ಎಂದು ಹೋಂಗಾರ್ಡ್ ತಿರುಗೇಟು ನೀಡಿದ್ದಾರೆ. ತಮಿಳುನಾಡು ರಾಜಕೀಯ ಮುಖಂಡರ ಆಕ್ಷೇಪಕ್ಕೆ ಹೋಂಗಾರ್ಡ್ ಬೇಸರ ಹೊರ ಹಾಕಿದ್ದಾರೆ. ನಂತರ ಸ್ಥಳೀಯ ಪೊಲೀಸರ ಸಲಹೆ ಮೇರೆಗೆ ಹೋಂಗಾರ್ಡ್ ವಿಜಿಲ್ ತೆಗೆದಿದ್ದಾರೆ.
ಚಿತ್ರಕೃಪೆ: ಎಐ

