ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಾಫ್ಟ್ ವೇರ್ ಇಂಜಿನಿಯರ್ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
29 ವರ್ಷದ ಭುವನೇಶ್ವರಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಭುವನೇಶ್ವರಿ ತನ್ನ 18 ತಿಂಗಳ ಮಗುವಿನೊಂದಿಗೆ ತಾಯಿ ಜೊತೆ ವಾಸವಾಗಿದ್ದರು. ಭುವನೇಶ್ವರಿ ಸ್ನೇಹಿತೆ ಆಕೆಗೆ ಕರೆ ಮಾಡಿದಾಗ ಆಕೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸದಿದ್ದಾಗ ಅನುಮಾನ ಬಂದಿದೆ. ಭುವನೇಶ್ವರಿ ತಾಯಿಗೆ ಕರೆ ಮಾಡಿ ಸ್ನೇಹಿತೆ ಹೇಳಿದ್ದರು. ಈ ವೇಳೆ ತಾಯಿ ಹಾಗೂ ನೆರೆಯವರು ಪರಿಶೀಲಿಸಿದಾಗ ಭುವನೇಶ್ವರಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಭುವನೇಶ್ವರಿ ತಂದೆ ತಮಿಳುನಾಡು ಮೂಲದ ಟಿ. ಅಂಬಳಗನ್ ಪೊಲೀಸರಿಗೆ ದೂರು ನೀಡಿದ್ದಾರೆ. ಭುವನೇಶ್ವರಿ ಪತಿ ಹರೀಶ್ ಕುಮಾರ್, ಅತ್ತೆ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕಳೆದ ಏಳು ತಿಂಗಳಿಂದ ಮಗಳು ಭುವನೇಶ್ವರಿ ಜೊತೆ ಪತಿ ಹರೀಶ್ ವಾಸಿಸುತ್ತಿರಲಿಲ್ಲ. ಭುವನೇಶ್ವರಿ ಹಾಗೂ ಹರೀಶ್ ಪರಸ್ಪರ ಪ್ರೀತಿಸಿ ಮದುವೆಯಾದವರು. 2022ರ ನವೆಂಬರ್ ನಲ್ಲಿ ಎರಡೂ ಕುಟುಂಬವನ್ನು ಒಪ್ಪಿಸಿ ವಿವಾಹವಾಗಿದ್ದರು. ಮದುವೆಗಾಗಿ 25 ಲಕ್ಷ ಹಣ ಖರ್ಚು ಮಾಡಿದ್ದೇವೆ. ಆದರೆ ಮಗಳು ಮದುವೆ ಬಳಿಕ ಪತಿ ಮನೆಯಲ್ಲಿ ತುಂಬಾ ಕಿರುಕುಳ ಅನುಭವಿಸುತ್ತಿದ್ದಳು. ಮಾನಸಿಕವಾಗಿ ಅಹಗೂ ದೈಹಿಕವಾಗಿ ಆಕೆಗೆ ಪತಿ ಮನೆಯವರು ಹಿಂಸಿಸುತ್ತಿದ್ದರು ಎಂದು ದೂರಿದ್ದಾರೆ.
2025ರ ಅಕ್ಟೋಬರ್ ನಲ್ಲಿ ಭುವನೇಶ್ವರಿ ತವರಿಗೆ ಬಂದಿದ್ದಳು. ಆ ಬಳಿಕ ಪತಿ ಹರೀಶ್ ಆಕೆಯನ್ನು ಕರೆದುಕೊಂಡು ಹೋಗಿಲ್ಲ. ಸಂಪರ್ಕವನ್ನೂ ಮಾಡಿಲ್ಲ. ಬದಲಾಗಿ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದ. ಬಳಿಕ ಭುವನೇಶ್ವರಿ ಜೆ.ಪಿ.ನಗರದ ಫ್ಲಾಟ್ ನಲ್ಲಿ ಮಗುವಿನೊಂದಿಗೆ ವಾಸಿಸುತ್ತಿದ್ದಳು. ಮಗುವಿಗೆ ಅನಾರೋಗ್ಯವಾದಾಗಲೂ ಅಳಿಯ ನೋಡಲು ಕೂಡ ಬಂದಿಲ್ಲ. 2026ರ ಏಪ್ರಿಲ್ 8ರಂದು ಭುವನೇಶ್ವರಿ ಮಾವ ಅಂದರೆ ಹರೀಶ್ ತಂದೆ ಸಾವನ್ನಪ್ಪಿದ್ದರು. ಆಗ ಭುವನೇಶ್ವರಿ ಹಾಗೂ ನಾವೆಲ್ಲ ಕುಟುಂಬದವರು ಅಂತ್ಯಕ್ರಿಯೆಗೆ ಹೋದಾಗ ನಮ್ಮನ್ನು ತಡೆದಿದ್ದರು. ಭುವನೇಶ್ವರಿ ಸಂಬಳದಿಂದ ಹಣ ನೀಡುವಂತೆ ಹಾಗೂ ಪೋಷಕರಿಂದ ಹಣ ತರುವಂತೆ ಹರೀಶ್ ಹಾಗೂ ಕುಟಿನ್ಬದವರು ಪೀಡಿಸುತ್ತಿದ್ದರು ಎಂದು ದೂರಿದ್ದಾರೆ.
ಇದೀಗ ಮಗಳು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ನ್ಯಾಯ ದೊರಗಿಸಿಕೊಂಡುವಂತೆ ಭುವನೇಶ್ವರಿ ತಂದೆ ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

