HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ 'ಕಾಂತಾರ' ನಟಿ ಸಪ್ತಮಿ ಗೌಡ

ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಕಾಂತಾರ’ ನಟಿ ಸಪ್ತಮಿ ಗೌಡ

ಕಾಂತರಾ ಖ್ಯಾತಿಯ ನಟಿ ಸಪ್ತಮಿ ಗೌಡ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2020 ರಲ್ಲಿ ತೆರೆ ಕಂಡ ಡಾಲಿ ಧನಂಜಯ ಅಭಿನಯದ ಪಾಪ್ಕಾರ್ನ್ ಮಂಕಿ ಚಿತ್ರದಲ್ಲಿ ಗಿರಿಜಾ ಎಂಬ ಪಾತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. 2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿದ್ದ ‘ಕಾಂತಾರ’ ದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆಯಿತು. ನಟಿ ಸಪ್ತಮಿ ಗೌಡ ಕೂಡ ಸ್ಟಾರ್ ನಟಿಯಾಗಿ  ಹೊರಹೊಮ್ಮಿದರು.

ನಟಿ ಸಪ್ತಮಿ ಗೌಡ ಕಳೆದ ವರ್ಷ ಇಂಡಿಯಾ ಹಿಂದಿಯ ‘ದಿ ವ್ಯಾಕ್ಸಿನ್ ವಾರ್’ ನಲ್ಲಿ ತೆರೆ ಹಂಚಿಕೊಂಡಿದ್ದರು ಇತ್ತೀಚಿಗೆ ಯುವರಾಜ್ ಕುಮಾರ್ ಅಭಿನಯದ ‘ಯುವ’ ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರು ಸಪ್ತಮಿ ಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular