HomeEntertainment'ಕಾಂಗರೂ' ಚಿತ್ರದ ಟ್ರೈಲರ್ ರಿಲೀಸ್

‘ಕಾಂಗರೂ’ ಚಿತ್ರದ ಟ್ರೈಲರ್ ರಿಲೀಸ್

ಕಿಶೋರ್ ಮೇಗಳಮನೆ ನಿರ್ದೇಶನದ ಆದಿತ್ಯ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ‘ಕಾಂಗರೂ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಆದಿತ್ಯ ಸೇರಿದಂತೆ ರಂಜಿನಿ ರಾಘವನ್, ಕರಿ ಸುಬ್ಬು, ನಾಗೇಂದ್ರ, ಗೌತಮ್, ಶಿವಮಣಿ, ಸ್ಪಂದನ ಪ್ರಸಾದ್, ಸುಬ್ಬಲಕ್ಷ್ಮಿ, ಅಶ್ವಿನ್ ಹಾಸನ್, ಪ್ರಶಾಂತ್ ನಟನ ತೆರೆ ಹಂಚಿಕೊಂಡಿದ್ದಾರೆ.ಚನ್ನಕೇಶವ ಸೇರಿದಂತೆ ನರಸಿಂಹಮೂರ್ತಿ, ಚಕ್ರಬಾವಿ, ರಮೇಶ್ ಬಂಡೆ, ಸ್ವಾಮಿ ಮತ್ತು ಕೆಜಿಆರ್ ಗೌಡ ನಿರ್ಮಾಣದ ಜವಾಬ್ದಾರಿಯನ್ನು ಒತ್ತಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಉದಯ್ ಲೀಲಾ ಛಾಯಗ್ರಹಣ, ಸಾಧು ಕೋಕಿಲ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular