ಉತ್ತರ ಕರ್ನಾಟಕ ಭಾಗದ ಹಲವು ಕಲಾವಿದರನ್ನು ‘ಕಲುಷ’ ಚಿತ್ರ ಒಟ್ಟಿಗೆ ಸೇರಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ಸಚಿವ ಎಂ.ಬಿ.ಪಾಟೀಲ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಕಲುಷ’ ಸಿನಿಮಾ ಉತ್ತರ ಕರ್ನಾಟಕದ ಹಲವು ಕಲಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ. ವಿಜಯಪುರದ ಷಣ್ಮುಖ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈ ಸಿನಿಮಾ ಈಗಾಗಲೇ ಸಿನಿ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ಗಮನ ಸೆಳೆಯುತ್ತಿದೆ. ಯುವಾನ್ ಪ್ರತಾಪ್, ಕೆ.ಎಸ್. ಶ್ರೀಧರ, ಬಲ ರಾಜ್ವಾಡಿ, ಸಂಜು ಬರಾಡೆ, ದೇವು ಕುಮಾರ್, ಐಶ್ವರ್ಯ ಮುತ್ತುರಾಜ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಕಲುಷ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಂತೋಷ ತಂದಿದೆ. ಚಿತ್ರತಂಡದ ಪರಿಶ್ರಮ ದೊಡ್ಡ ಯಶಸ್ಸಾಗಿ ಮೂಡಿಬರಲಿ ಎಂದು ಹೃತ್ಪೂರ್ವಕ ಶುಭ ಹಾರೈಸುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಡಾ.ಪ್ರವೀಣ್ ಚೌರ, ಆನಂದ ಜಾಧವ, ರಾಮನಗೌಡ ಬಿರಾದಾರ (ತಿಡಗುಂದಿ), ಪ್ರಕಾಶ್ ಮಠ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಉತ್ತರ ಕರ್ನಾಟಕದ ಪ್ರತಿಭೆಯಿಂದ ಮೂಡಿಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲಿ ಎಂಬ ಆಶಯ ನನ್ನದು ಎಂದು ಸಚಿವರು ಶುಭ ಹಾರೈಸಿದ್ದಾರೆ.

