HomeEntertainmentಸಾವಿರ ಕೋಟಿ ರೂ ಕಲೆಕ್ಷನ್ ಮಾಡಿದ 'ಕಲ್ಕಿ 2898 AD'

ಸಾವಿರ ಕೋಟಿ ರೂ ಕಲೆಕ್ಷನ್ ಮಾಡಿದ ‘ಕಲ್ಕಿ 2898 AD’

ಜೂನ್ 27 ರಂದು ವಿಶ್ವಾದ್ಯಂತ ತೆರೆಕಂಡಿದ್ದ ‘ಕಲ್ಕಿ 2898 AD’ ಚಿತ್ರ ಪ್ರೇಕ್ಷಕರ  ಗಮನ ಸೆಳೆದಿದ್ದು ಅಮಿತಾಬ್ ಬಚ್ಚನ್, ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅವರ  ನಟನೆಗೆ ಫಿದಾ ಆಗಿದ್ದಾರೆ. ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಬಾಹುಬಲಿ ಬಳಿಕ ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಇದೀಗ ಕಮ್ ಬ್ಯಾಕ್ ಮಾಡಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್  ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲಹಾಸನ್, ದಿಶಾ ಪಟಾನಿ, ಬ್ರಹ್ಮಾನಂದಂ,‌ ರಾಜೇಂದ್ರ ಪ್ರಸಾದ್, ಪಶುಪತಿ, ಹರ್ಷಿತ್ ರೆಡ್ಡಿ, ಅಯಾಜ್ ಪಾಷಾ, ಕೀಯಾ ನಾಯ, ವಿನಯ್ ಕುಮಾರ್, ವೆಂಕಟ ರಮಣ, ಬಣ್ಣ ಹಚ್ಚಿದ್ದಾರೆ.

ಇನ್ನುಳಿದಂತೆ ವಿಜಯ್ ದೇವರಕೊಂಡ, ಮಾಳವಿಕಾ ನಾಯರ್, ರಾಮ್ ಗೋಪಾಲ್ ವರ್ಮಾ, SS ರಾಜಮೌಳಿ, ದುಲ್ಕರ್ ಸಲ್ಮಾನ್ , ಮೃಣಾಲ್ ಠಾಕೂರ್, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈ ಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಸಿ.ಅಸ್ವಾನಿ ದತ್, ಸ್ವಪ್ನಾ ದತ್, ಹಾಗೂ ಪ್ರಿಯಾಂಕಾ ದತ್ ಬಂಡವಾಳ ಹೂಡಿದ್ದಾರೆ.  ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ನೀಡಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular