HomeIndiaಸಿಆರ್ ಪಿಎಫ್, ಪೊಲೀಸ್ ಪಡೆ ಮೇಲೆ ದುಷ್ಕರ್ಮಿಗಳ ದಾಳಿ; ಓರ್ವ ಯೋಧ ಹುತಾತ್ಮ

ಸಿಆರ್ ಪಿಎಫ್, ಪೊಲೀಸ್ ಪಡೆ ಮೇಲೆ ದುಷ್ಕರ್ಮಿಗಳ ದಾಳಿ; ಓರ್ವ ಯೋಧ ಹುತಾತ್ಮ

ಸಿಆರ್ ಪಿಎಫ್ ಹಾಗೂ ಪೊಲಿಸ್ ಪಡೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿರುವ ಘಟನೆ ಮಣಿಪುರದ ಜಿರಿಬಾಮ್ ನಲ್ಲಿ ನಡೆದಿದೆ.

ದುಷ್ಕರ್ಮಿಗಳು ಸಿಆರ್ ಪಿಎಫ್ ಹಾಗೂ ಪೊಲೀಸ್ ಪಡೆಗಳ ಮೇಲೆ ಹೊಂಚು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಪೊಲಿಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಜುಲೈ 13ರಂದು ನಡೆದಿದ್ದ ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ 20 ಬೆಟಾಲಿಯನ್ ಸಿಆರ್ ಪಿಎಫ್ ಹಾಗೂ ಜಿರಿಬಾಮ್ ಜಿಲ್ಲಾ ಪೊಲೀಸ್ ತಂಡ ಜಂತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಮೃತ ಯೋಧನನ್ನು ಬಿಹಾರ ಮೂಲದ ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular