HomeEntertainmentಇಂದು 'ಕಾಲಾಪತ್ಥರ್' ಚಿತ್ರದ ಟ್ರೈಲರ್ ಲಾಂಚ್ ಇವೆಂಟ್

ಇಂದು ‘ಕಾಲಾಪತ್ಥರ್’ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು | udayavani

‘ಕಾಲೇಜ್ ಕುಮಾರ’ ಖ್ಯಾತಿಯ ವಿಕ್ಕಿ ವರುಣ್ ನಟಿಸಿ ನಿರ್ದೇಶಿಸಿರುವ ‘ಕಾಲಾಪತ್ಥರ್’ ಚಿತ್ರ ಸೆಪ್ಟಂಬರ್ 13ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಮನರಂಜನೆಯ  ರಸದೌತಣ ನೀಡಲು ಸಜ್ಜಾಗಿದೆ. ಇಂದು ಲೂಲು ಮಾಲ್ ಗೋಪಾಲಪುರದಲ್ಲಿ ಕಾಲಾಪತ್ಥರ್  ಟ್ರೈಲರ್ ಲಾಂಚ್ ಇವೆಂಟ್  ಕಾರ್ಯಕ್ರಮವಿದ್ದು, ಸಂಜೆ 6:45ಕ್ಕೆ  ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಆಗಲಿದೆ.

ಈ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ವಿಕ್ಕಿ ವರುಣ್ ಹಾಗೂ ಧನ್ಯ ರಾಮ್ ಕುಮಾರ್ ಸೇರಿದಂತೆ ನಾಗಾಭರಣ, ಅಚ್ಯುತ್ ಕುಮಾರ್ ಸಂಪತ್, ರಾಜೇಶ್ ನಟರಂಗ, ಗಲ್ಲಿ ನಟ, ಬಸು ಹಿರೇಮಠ, ಕಾಂತರಾಜ್ ಕಡ್ಡಿಪುಡಿ ಬಣ್ಣ ಹಚ್ಚಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ವಿಕ್ರಮ್ ಮೋರ್ ಮತ್ತು ಮಾಸ್ ಮಾದ ಅವರ ಸಾಹಸ ನಿರ್ದೇಶನ, ಪುಟ್ಟರಾಜು ವೇಷಭೂಷಣ, ಹಾಗೂ ಸಂದೀಪ್ ಕುಮಾರ್ ಛಾಯಾಗ್ರಾಹಣವಿದೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular