HomeKarnatakaಸಿಎಂ ಸ್ಥಾನಕ್ಕೇರಲು ಸೂಟ್ ಹೊಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ: ಸಿದ್ದರಾಮಯ್ಯನವರು ಕುರ್ಚಿ ಖಾಲಿ ಮಾಡುವುದನ್ನೇ ಕಾಂಗ್ರೆಸ್ ನಾಯಕರು...

ಸಿಎಂ ಸ್ಥಾನಕ್ಕೇರಲು ಸೂಟ್ ಹೊಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ: ಸಿದ್ದರಾಮಯ್ಯನವರು ಕುರ್ಚಿ ಖಾಲಿ ಮಾಡುವುದನ್ನೇ ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ: ಬಿಜೆಪಿ ಟಾಂಗ್

ಬೆಂಗಳೂರು: ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಒಳ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೇರಲು ಸೂಟ್ ಹೊಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗ ತೊಡಗಿದೆ..! ಎಂದು ರಾಜ್ಯ ಬಿಜೆಪಿ ಟಾಂಗ್ ನೀಡಿದೆ.

ನಾವೆಲ್ಲರೂ ಸಿದ್ದರಾಯ್ಯನವರ ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತೇವೆ ಎಂದು ಹೇಳುತ್ತಿದ್ದವರೇ ಈಗ ತಾವು ಸಿಎಂ ಹುದ್ದೆಯ ಆಕಾಂಕ್ಷಿಗಳು ಎನ್ನತೊಡಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯನವರ ಕುರ್ಚಿಗೆ ಬಂದಿರುವ ಕಂಟಕವನ್ನ ಸ್ವತಃ ಆ ವಿಘ್ನ ವಿನಾಯಕನೂ ತಪ್ಪಿಸಲಾರ!

ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ಎಪಿಸೋಡ್ ಮುಗಿಯುತ್ತಿದ್ದಂತೆ ಸಚಿವ ಎಂ.ಬಿ.ಪಾಟೀಲ್ ತಾವು ಸಿಎಂ ಆಕಾಂಕ್ಷಿಯೆಂದು ಡಂಗೂರ ಸಾರುತ್ತಿದ್ದಾರೆ. ಹೊರಗೆ ಬೆಂಬಲ, ಒಳಗೆ ಹಂಬಲ ವಿಟ್ಟುಕೊಂಡಿರುವ ಕೆಲ ಕಾಂಗ್ರೆಸ್ಸಿಗರೆಲ್ಲಾ ಸಿದ್ದರಾಮಯ್ಯನವರು ಯಾವಾಗ.? ಕುರ್ಚಿ ಖಾಲಿ ಮಾಡುತ್ತಾರೆ ಎಂಬುವುದನ್ನೇ ಕಾಯುತ್ತಿದ್ದಾರೆ.! ಎಂದು ವ್ಯಂಗ್ಯವಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular