HomeKarnatakaಅಪಾಯ ಲೆಕ್ಕಿಸದೇ ಹಳ್ಳ ದಾಟಲು ಹೋದ ಯುವಕ...ಗ್ರಾಮಸ್ಥರ ಕಣ್ಮುಂದೆಯೇ ನೀರು ಪಾಲು...!

ಅಪಾಯ ಲೆಕ್ಕಿಸದೇ ಹಳ್ಳ ದಾಟಲು ಹೋದ ಯುವಕ…ಗ್ರಾಮಸ್ಥರ ಕಣ್ಮುಂದೆಯೇ ನೀರು ಪಾಲು…!

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಾದ್ಯಂತ ವರುಣಾರ್ಭಟಕ್ಕೆ ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸೇತುವೆ, ರಸ್ತೆಗಳು ಜಲಾವೃತವಾಗಿವೆ. ಈ ಮಧ್ಯೆ ಅಪಾಯವನ್ನು ಲೆಕ್ಕಿಸದೇ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ದೋಟಿಕೊಳದಲ್ಲಿ ನಡೆದಿದೆ.

ಕಲಬುರ್ಗಿಯ ಚಿಂಚೋಳಿ ತಾಲೂಕಿನ ದೋಟಿಕೊಳ ಹಳ್ಳ ಅಪಾಯದ ಮಟ್ಟ ಮೀರಿ ಸೇತುವೆಯ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರು ಯುವಕನಿಗೆ ಹಳ್ಳದಾಟದಂತೆ ಬುದ್ಧಿ ಹೇಳಿದರೂ ಕೇಳದೇ ಯುವಕ ಹುಚ್ಚಾಟ ಮೆರೆಯಲು ಹೋಗಿದ್ದಾನೆ. ಮಾರುತಿ ಎಂಬ ಯುವಕ ಹಳ್ಳದಾಟಲು ಮುಂದಾಗಿದ್ದು, ಈ ವೇಳೆ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆಯೇ ಕೊಚ್ಚಿ ಹೋಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕಲಬುರ್ಗಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಕಟ್ಟಡ, ಕಚೇರಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ವರುಣಾರ್ಭಟಕ್ಕೆ ಜನ ಜೀವನ ಅಸ್ತವ್ಯಸ್ಥಗೊಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular