HomeLatest NewsBREAKING : ಕೋರ್ಟ್ ಗೆ ಹೋಗಲು ರೆಡಿಯಾಗುತ್ತಿದ್ದ ಜಡ್ಜ್ ವಿಶ್ವನಾಥ್ ವಿ.ಮೂಗತಿ ಹೃದಯಾಘಾತದಿಂದ ಸಾವು!

BREAKING : ಕೋರ್ಟ್ ಗೆ ಹೋಗಲು ರೆಡಿಯಾಗುತ್ತಿದ್ದ ಜಡ್ಜ್ ವಿಶ್ವನಾಥ್ ವಿ.ಮೂಗತಿ ಹೃದಯಾಘಾತದಿಂದ ಸಾವು!

ಕಲಬುರಗಿ: ಕೋರ್ಟ್ ಗೆ ಹೋಗಲು ರೆಡಿಯಾಗುತ್ತಿದ್ದ ಜಡ್ಜ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಜಡ್ಜ್ ವಿಶ್ವನಾಥ್ ವಿ.ಮೂಗತಿ ಮೃತಪಟ್ಟಿರುವ ಜಡ್ಜ್. ಕಲಬುರಗಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವಿಶ್ವನಾಥ್, ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದವಾರವಷ್ಟೇ ಕಲಬುರಗಿ ಕೋರ್ಟ್ ಗೆ ವರ್ಗಾವಣೆಗೊಂಡಿದ್ದರು. ಎಂದಿನಂತೆ ಕೋರ್ಟ್ ಗೆ ತೆರಳು ಮನೆಯಲ್ಲಿ ರೆಡಿಯಾಗುತ್ತಿದ್ದ ವೇಳೆ ವಿಶ್ವನಾಥ್ ಅವರಿಗೆ ಏಕಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಿಶ್ವನಾಥ್ ಮೂಗತಿ ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular