HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಜೂನಿಯರ್ NTR

ಹುಟ್ಟು ಹಬ್ಬದ ಸಂಭ್ರಮದಲ್ಲಿ ಜೂನಿಯರ್ NTR

ಟಾಲಿವುಡ್ ನಲ್ಲಿ ತಮ್ಮ ಮಾಸ್ ಸಿನಿಮಾಗಳ ಮೂಲಕ ಅಭಿಮಾನಿಗಳ ದಂಡೆ ಹೊಂದಿರುವ ನಟ ಜೂನಿಯರ್ ಎನ್ಟಿಆರ್ ಇಂದು ತಮ್ಮ 41ನೇ ಹುಟ್ಟು ಹಬ್ಬದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ನಟ ಜೂನಿಯರ್ ಎನ್ಟಿಆರ್ 1991 ರಲ್ಲಿ ತೆರೆ ಕಂಡ ‘ಬ್ರಹ್ಮಶ್ರೀ ವಿಶ್ವಾಮಿತ್ರ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. 2001ರಲ್ಲಿ ವಿ ಆರ್ ಪ್ರತಾಪ್ ನಿರ್ದೇಶನದ ‘ನಿನ್ನು ಚೂಡಾಲನಿ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದರು. ‘ಸಿಂಹಾದ್ರಿ’ ಚಿತ್ರ   ಇವರಿಗೆ ಭರ್ಜರಿ  ಯಶಸ್ಸು ತಂದುಕೊಟ್ಟಿತು. ಬಳಿಕ ಸ್ಟಾರ್ ನಟನಾಗಿ ಹೊರಹೊಮ್ಮಿದರು.

2023ರಲ್ಲಿ ಬಿಡುಗಡೆಯಾಗಿದ್ದ ರಾಜ ಮೌಳಿ ನಿರ್ದೇಶನದ ‘RRR’ ಚಿತ್ರದ ಮೂಲಕ ಜೂನಿಯರ್ ಎನ್ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇವರ ‘ದೇವರ’  ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದ್ದು, ‘ವಾರ್ 2’ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಮತ್ತು ನಟ ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://x.com/SVC_official/status/1792396686947737721?ref_src=twsrc%5Egoogle%7Ctwcamp%5Eserp%7Ctwgr%5Etweet

https://x.com/vamsi84/status/1792393602867589312?ref_src=twsrc%5Egoogle%7Ctwcamp%5Eserp%7Ctwgr%5Etweet

For Latest News Updates, Join Our Whatsapp Community🚩
RELATED ARTICLES

Most Popular