HomeLatest NewsJOB ALERT : ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ...

JOB ALERT : ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : 2025-26 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ಹೆಚ್ಎಂ)ದ ಅಡಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಎನ್ಪಿಪಿಸಿಡಿ ವಿಭಾಗಕ್ಕೆ ಆಡಿಯೋಮೆಟ್ರಿಕ್ ಅಸಿಸ್ಟೆಂಟ್ 01 ಹುದ್ದೆ, ಶ್ರವಣದೋಷವುಳ್ಳ ಮಕ್ಕಳ ಬೋಧಕರು 01 ಹುದ್ದೆ, ಡಿಇಐಸಿ ವಿಭಾಗಕ್ಕೆ ಡಿಇಐಸಿ ಮ್ಯಾನೇಜರ್ 01 ಹುದ್ದೆ ಹಾಗೂ ಮೆಡಿಕಲ್ ಆಫೀಸರ್ 01 ಹುದ್ದೆ ನೇಮಕ ಮಾಡಿಕೊಳ್ಳಲಾಗುವುದು.

ಜೂನ್ 23 ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಅರ್ಜಿ ನಮೂನೆಯನ್ನು ಎನ್ಹೆಚ್ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣ, ಬಿಹೆಚ್ ರಸ್ತೆ ಶಿವಮೊಗ್ಗ ಇಲ್ಲಿ ವಿತರಿಸಲಾಗುವುದು. ಹಾಗೂ ಅದೇ ದಿನ ಸಂಜೆ 5.30 ರವರೆಗೆ ಈ ಎಲ್ಲ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು. ಹಾಗೂ ಪ್ರತಿ ಸೋಮವಾರ ತಜ್ಞವೈದ್ಯರು ಮತ್ತು ವೈದ್ಯರ ಹುದ್ದೆಗಳು ಭರ್ತಿ ಆಗುವವರೆಗೆ ನೇರ ಸಂದರ್ಶನ ನಡೆಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ನಿಯಮಾವಳಿಯಂತೆ ಎನ್ಹೆಚ್ಎಂ ಮಾರ್ಗಸೂಚಿಯನ್ವಯ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು. ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಮತ್ತು ಸ್ವ ವಿವರದೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-200337 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular