HomeLatest NewsSHOCKING : ದೇಶದಲ್ಲಿ ಮತ್ತೊಂದು 'ಪೈಶಾಚಿಕ ಕೃತ್ಯ' : ಬೀಚ್ ನಲ್ಲಿ ಸ್ನೇಹಿತನ ಎದುರೇ ವಿದ್ಯಾರ್ಥಿನಿ...

SHOCKING : ದೇಶದಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಬೀಚ್ ನಲ್ಲಿ ಸ್ನೇಹಿತನ ಎದುರೇ ವಿದ್ಯಾರ್ಥಿನಿ ಮೇಲೆ 10 ಮಂದಿಯಿಂದ ಗ್ಯಾಂಗ್ ರೇಪ್.!

ಒಡಿಶಾದ ಭುವನೇಶ್ವರದಲ್ಲಿ 20 ವರ್ಷದ ಯುವತಿಯ ಮೇಲೆ 10 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಜಾಂ ಜಿಲ್ಲೆಯ ಗೋಪಾಲ್ಪುರ ಪ್ರದೇಶದ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಯುವತಿ ನೀಡಿದ ದೂರಿನ ಮೇರೆಗೆ ಗೋಪಾಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಸಂತ್ರಸ್ತ ಯುವತಿ ಇತರ ಮೂವರು ಯುವತಿಯರ ಜೊತೆ ಹಾಗೂ ತನ್ನ ಗೆಳೆಯನೊಂದಿಗೆ ಬೀಚ್ಗೆ ಹೋದಾಗ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ ನಾವು ಏಕಾಂತ ಸ್ಥಳದಲ್ಲಿ ಕುಳಿತಿದ್ದಾಗ, 10 ಜನರ ಗುಂಪು ತಮ್ಮ ಬಳಿಗೆ ಬಂದು, ತನ್ನ ಗೆಳೆಯನನ್ನು ವಶಕ್ಕೆ ತೆಗೆದುಕೊಂಡು, ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ ಎಲ್ಲಾ 10 ಆರೋಪಿಗಳನ್ನು ಬಂಧಿಸಲಾಗಿದೆ. “ಬಂಧಿತರಾದ ಎಲ್ಲಾ ವ್ಯಕ್ತಿಗಳು ವಯಸ್ಕರು, ಮತ್ತು ನಾವು ಅವರನ್ನು ವಿವಿಧ ಕೋನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳು ಸ್ಥಳೀಯರಲ್ಲ ಮತ್ತು ಹಬ್ಬದ ಸಂದರ್ಭದಲ್ಲಿ ಬೀಚ್ಗೆ ಭೇಟಿ ನೀಡಿದ್ದರು ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಸಂತ್ರಸ್ತೆ ಮತ್ತು ಬಂಧಿತ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular