HomeLatest Newsಸಭೆಯಲ್ಲಿಯೇ ಲಂಚಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ತಹಶಿಲ್ದಾರ್: ಆಡಿಯೋ ವೈರಲ್

ಸಭೆಯಲ್ಲಿಯೇ ಲಂಚಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ತಹಶಿಲ್ದಾರ್: ಆಡಿಯೋ ವೈರಲ್

ಕಲಬುರಗಿ: ತಹಶಿಲ್ದಾರ್ ಓರ್ವರು ಸಭೆಯಲ್ಲಿಯೇ ಸಿಬ್ಬಂದಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ.

ತಹಶಿಲ್ದಾರ್ ಮಲ್ಲಣ್ಣ ಯಲಗೋಡ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಜೇವರ್ಗಿ ತಹಶಿಲ್ದಾರ್ ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ತಹಶಿಲ್ದಾರ್ ಮಲ್ಲಣ್ಣ ಸಭೆಯಲ್ಲಿ ಓಪನ್ ಆಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಹಶಿಲ್ದಾರ್ ಕಾಟಕ್ಕೆ ಬೇಸತ್ತ ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ವೈರ್ ಆಗಿರುವ ಆಡಿಯೋದಲ್ಲಿ ತಹಶಿಲ್ದಾರ್ ಮಲ್ಲಣ್ಣ, ನನ್ನ ಹೆಸರಲ್ಲಿ ನೀವು ಹಣ ಮಾಡುತ್ತೀರಿ. ಹಾಗಾಗಿ ನನಗೂ ಹಣ ನೀಡಿ ಎಂದು ಸಿಬ್ಬಂದಿಗಳಿಗೆ ಆವಾಜ್ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಹಶಿಲ್ದಾರ್ ಹಣದ ಆಸೆಗೆ ನೊಂದ ಆರ್ ಐ, ನನಗೆ ಆರ್ ಐ ಜವಾಬ್ದಾರಿಯೇ ಬೇಡ. ನನ್ನನ್ನು ಕಚೇರಿ ಕೆಲಸಕ್ಕೆ ಹಾಕಿ. ನನಗೆ ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಸರ್ಕಾರಿ ಜಯಂತಿಗಳು ನಡೆದರೂ, ಶಾಸಕರು ಹೇಳಿದ ಕೆಲಸ ಮಾಡಲು ನಾವು ನಿಮಗೆ ಹಣ ನೀಡಬೇಕು ಎಂದರೆ ನಾವು ಎಲ್ಲಿಂದ ಹಣ ತರುವುದು? ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ. ಇದಕ್ಕೆ ತಹಶಿಲ್ದಾರ್ ಮಲ್ಲಣ್ಣ, ಎಲ್ಲಾ ಇಲಾಖೆಗಳಲ್ಲಿಯೂ ಹಣ ಕೊಡ್ತಾರೆ. ನೀವೂ ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಆಡಿಯೋ ವೈರಲ್ ಆಗುತ್ತಿದ್ದಂತೆ ತಹಶಿಲ್ದಾರ್ ಮಲ್ಲಣ್ಣ, ಆರು ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದಿದ್ದ ಕಾರ್ಯಕ್ರಮದ ವಿಚಾರವಾಗಿ ನಾನು ಸಿಬ್ಬಂದಿಗಳ ಸಭೆ ನಡೆಸಿ ಚರ್ಚಿಸಿದ್ದೆ ಹೊರತು ನಾನು ಯಾರ ಬಳಿಯೂ ಹಣ ಕೇಳಿಲ್ಲ. ನನ್ನ ವಿರುದ್ಧದ ಆರೋಪ ಸುಳ್ಳು ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular