HomeKarnatakaಸಂಚಾರಿ ಪೊಲೀಸರಿಗೆ ಆವಾಜ್; ಜಾಸ್ತಿ ಮಾತನಾಡಿದ್ರೆ ಮನೆಗೆ ಕಳುಹಿಸುತ್ತೇನೆ ಎಂದು ದರ್ಪ ತೋರಿದ ಜೆಡಿಎಸ್ ಮಾಜಿ...

ಸಂಚಾರಿ ಪೊಲೀಸರಿಗೆ ಆವಾಜ್; ಜಾಸ್ತಿ ಮಾತನಾಡಿದ್ರೆ ಮನೆಗೆ ಕಳುಹಿಸುತ್ತೇನೆ ಎಂದು ದರ್ಪ ತೋರಿದ ಜೆಡಿಎಸ್ ಮಾಜಿ ಶಾಸಕ

ಬೆಂಗಳೂರು: ಹೆಲ್ಮೆಟ್ ಕಡ್ಡಾಯ ನಿಯಮದಡಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡುತ್ತಿದ್ದಾಗ ಜೆಡಿಎಸ್ ಮಾಜಿ ಶಾಸಕ ಪೊಲೀಸರಿಗೆ ಆವಾಜ್ ಹಾಕಿದ ಘಟನೆ ಬೆಂಗಳುರು-ಮಾಗಡಿ ರಸ್ತೆಯಲ್ಲಿ ನಡೆದಿದೆ.

ಮಾಗಡಿ ಪಟ್ಟಣದ ಸೋಮೇಶ್ವರ ಕಾಲೋನಿ ಬಳಿ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತದವರಿಂದ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಈ ವೇಳೆ ವಾಹನ ಸವಾರರು ಪೊಲೀಸರ ನಡುವೆ ಕಿರಿಕ್ ಉಂಟಾಗಿದ್ದು, ಇದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜೆಡಿಎಸ್ ಮಾಜಿ ಶಾಸಕ ಎ.ಮಂಜುನಾಥ್ ಸ್ಥಳೀಯರಿಗೆ ದಂಡ ಹಾಕದಂತೆ ತಾಕೀತು ಮಾಡಿದ್ದಾರೆ.

ನಮ್ಮ ರೂಲ್ಸ್ ಪಾಲಿಸುತ್ತಿದ್ದೇವೆ ಎಂದು ಪೊಲಿಸರು ಹೇಳುತ್ತಿದ್ದಂತೆ, ಹೆಚ್ಚು ಮಾತನಾಡಬೇಡ, ಎಸ್ ಪಿಗೆ ಮಾತನಾಡುತ್ತೇನೆ. ರೂಲ್ಸ್ ಬಗ್ಗೆ ಜಾಸ್ತಿ ಮಾತನಾಡಿದರೆ ನಿಮ್ಮ ಮನೆಗೆ ಕಳುಹಿಸ್ತೇನೆ. ಸ್ಥಳೀಯರಿಗೆ ಯಾಕೆ ಫೈನ್ ಹಾಕ್ತಿದ್ದೀರಾ ಎಂದು ಆವಾಜ್ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular