HomeLatest Newsಗುಟ್ಕಾ ಉಗುಳಲು ಲಾರಿಯಿಂದ ತಲೆ ಹೊರ ಹಾಕಿದಾಗ ದುರಂತ: ಕತ್ತರಿಸಿ ಹೋಯ್ತು ಚಾಲಕನ ತಲೆ

ಗುಟ್ಕಾ ಉಗುಳಲು ಲಾರಿಯಿಂದ ತಲೆ ಹೊರ ಹಾಕಿದಾಗ ದುರಂತ: ಕತ್ತರಿಸಿ ಹೋಯ್ತು ಚಾಲಕನ ತಲೆ

ವಾಹನಗಳಲ್ಲಿ ಪ್ರಾಯಾಣಿಸುವವರು ಅನೇಕರು ಬಾಯಿಯಲ್ಲಿರುವುದನ್ನು ಉಗುಳಲೆಂದು ಕಿಟಕಿಯಿಂದ ತಲೆ ಹೊರಗೆ ಹಾಕಿ ಉಗುಳುವುದನ್ನು ನೋಡುತ್ತೇವೆ. ಹೀಗೆ ತಲೆ ಹೊರಗೆ ಹಾಕಲು ಹೋಗಿ ಹಲವರು ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆಗಳನ್ನೂ ಗಮನಿಸಿದ್ದೇವೆ. ಆದರೂ ಎಚ್ಚರಗೊಳ್ಳದ ಜನರು ಮತ್ತದೇ ತಪ್ಪು ಮಾಡುತ್ತಲೇ ಇರುತ್ತಾರೆ. ಇಲ್ಲೋರ್ವ ವ್ಯಕ್ತಿ ಗುಟ್ಕಾ ಉಗುಳಲು ಹೋಗಿ ಎಂತಹ ಅಪಾಯ ತಂದುಕೊಂಡಿದ್ದಾನೆ ನೋಡಿ.

ಗುಟ್ಕಾ ಉಗುಳಲೆಂದು ಲಾರಿಯಿಂದ ತಲೆ ಹೊರಹಾಕಿದ ವ್ಯಕ್ತಿ ತನ್ನ ತಲೆಯನ್ನೇ ಕಳೆದುಕೊಂಡಿದ್ದಾನೆ. ಮಿನಿ ಲಾರಿ ಚಲಾಯಿಸುತ್ತಿದ್ದ ಚಾಲಕ ಗುಟ್ಕಾ ಉಗುಳಲೆಂದು ತಲೆ ಹೊರಗೆ ಹಾಕಿದ್ದ ವೇಳೆ ವೇಗವಾಗಿ ಬಂದ ಇನ್ನೊಂದು ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕನ ತಲೆಯೇ ಕತ್ತರಿಸಿಹೋಗಿದೆ.

ಮಧ್ಯಪ್ರದೇಶದ ಖರ್ಗೋನೆಯಲ್ಲಿ ಈ ದುರಂತ ಸಂಭವಿಸಿದ್ದು, ಬರ್ವಾನಿ ಜಿಲ್ಲೆಯ ತಳವಾರ ಡ್ಯಾಂ ನಿವಾಸಿ ಆಕಾಶ್ ಮಕಸಾರೆ ಮೃತ ದುರ್ದೈವಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಾರಿಯಿಂದ ತಲೆ ಹೊರಹಾಕಿ ಉಗುಳುವಾಗ ಸಂಭವಿಸಿದ ಅಪಘಾತದಲ್ಲಿ ಚಾಲಕನ ತಲೆ ಹಾಗೂ ಕೈ ತುಂಡಾಗಿ ರಸ್ತೆಯಲ್ಲಿ ಬಿದ್ದಿದೆ. ಇದನ್ನು ಕಂಡ ಸಾರ್ವಜನಿಕರು ಗಾಬರಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುತಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತ ಮಾಡಿದ ಇನ್ನೊಂದು ವಾಹನ ಚಾಲಕ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular