HomeLatest Newsಯುಪಿ ಟಿ20 ಲೀಗ್ ಉದ್ಘಾಟನೆಯಲ್ಲಿ ಸಖತ್ ಗಿಫ್ಟ್: ಪ್ರದರ್ಶನ ನೀಡುತ್ತಲೇ ಫ್ಯಾನ್ಸ್‌ಗೆ ಒಡವೆ ನೀಡಿದ 'ಧುರಂಧರ್'...

ಯುಪಿ ಟಿ20 ಲೀಗ್ ಉದ್ಘಾಟನೆಯಲ್ಲಿ ಸಖತ್ ಗಿಫ್ಟ್: ಪ್ರದರ್ಶನ ನೀಡುತ್ತಲೇ ಫ್ಯಾನ್ಸ್‌ಗೆ ಒಡವೆ ನೀಡಿದ ‘ಧುರಂಧರ್’ ಗಾಯಕಿ

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಯುಪಿ ಟಿ20 ಲೀಗ್ 4ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಪಂಜಾಬಿ ಗಾಯಕಿ ಜಾಸ್ಮಿನ್ ಸ್ಯಾಂಡ್‌ಲಾಸ್ ಅಭಿಮಾನಿಗಳಿಗೆ ಅಚ್ಚರಿಯ ಗಿಫ್ಟ್ ನೀಡಿದ್ದಾರೆ. ಆಗಸ್ಟ್ 14ರಂದು ನಡೆದ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವಾಗ ತಮ್ಮ ಮೈಮೇಲಿದ್ದ ಆಭರಣಗಳನ್ನು ಕಳೆದು ಅಭಿಮಾನಿಗಳತ್ತ ತೂರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ವೇದಿಕೆಯ ಮೇಲಿಂದ ಕೇವಲ ಹಾಡುವುದಷ್ಟೇ ಅಲ್ಲದೆ ಮೈದಾನದ ಬೌಂಡರಿ ಗೆರೆಯಲ್ಲಿದ್ದ ಅಭಿಮಾನಿಗಳ ಬಳಿಗೆ ತೆರಳಿದ ಜಾಸ್ಮಿನ್, ತಮ್ಮ ಆಭರಣಗಳನ್ನು ತೆಗೆದು ಅವರತ್ತ ಎಸೆದರು. ಇದನ್ನು ಕಂಡು ನಿರೀಕ್ಷಿಸದ ಅಭಿಮಾನಿಗಳು ಆಭರಣಗಳನ್ನು ಹಿಡಿಯಲು ಮುಗಿಬಿದ್ದಿದ್ದು, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರಲ್ಲಿ ಭಾರೀ ಕಾತರ ಮತ್ತು ಸಂಭ್ರಮವನ್ನುಂಟು ಮಾಡಿತು.

ಖ್ಯಾತ ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಜಾಸ್ಮಿನ್ ಅವರ ಈ ನಡೆ ಉದ್ಘಾಟನಾ ಸಂಜೆಯ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು. ಇತ್ತೀಚೆಗೆ ‘ಧುರಂಧರ್’ ಸಿನಿಮಾದ ಸೂಪರ್ ಹಿಟ್ ಹಾಡುಗಳ ಮೂಲಕ ಸದ್ದು ಮಾಡಿದ್ದ ಗಾಯಕಿ ಜಾಸ್ಮಿನ್, ತಮ್ಮ ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ಈ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿ ಪಂದ್ಯಾವಳಿಗೆ ಮತ್ತಷ್ಟು ಕಳೆ ತಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Jasmine Sandlas gifted her jewellery to fans while performing at the UPT20 League opener 😍🔥

— But the question is: Was it actually gold? 😄 pic.twitter.com/3Bx0wUKbSz

— Jara (@JARA_Memer) August 15, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular