HomeLatest News350 ಗೋಲುಗಳ ಭವ್ಯ ಯಾನಕ್ಕೆ ತೆರೆ: ಫುಟ್‌ಬಾಲ್‌ಗೆ ವಿದಾಯ ಹೇಳಿದ ಇಟಲಿ ದಿಗ್ಗಜ ಸಿರೋ ಇಮ್ಮೊಬೈಲ್

350 ಗೋಲುಗಳ ಭವ್ಯ ಯಾನಕ್ಕೆ ತೆರೆ: ಫುಟ್‌ಬಾಲ್‌ಗೆ ವಿದಾಯ ಹೇಳಿದ ಇಟಲಿ ದಿಗ್ಗಜ ಸಿರೋ ಇಮ್ಮೊಬೈಲ್

ಇಟಲಿ ಫುಟ್‌ಬಾಲ್ ತಂಡದ ಪ್ರಮುಖ ಮುಂಚೂಣಿ ಆಟಗಾರ ಹಾಗೂ ಲ್ಯಾಜಿಯೊ ಕ್ಲಬ್‌ನ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಸಿರೋ ಇಮ್ಮೊಬೈಲ್ ತಮ್ಮ 36ನೇ ವಯಸ್ಸಿನಲ್ಲಿ ವೃತ್ತಿಪರ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್ ಎಫ್‌ಸಿ ತಂಡ ತೊರೆದ ಬಳಿಕ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದು, 17 ವರ್ಷಗಳ ಸುದೀರ್ಘ ಕ್ರೀಡಾ ಪಯಣಕ್ಕೆ ತೆರೆ ಬಿದ್ದಿದೆ.

ತಮ್ಮ ಸಹ ಆಟಗಾರರೊಂದಿಗೆ ಮಾತನಾಡಿದ ವೀಡಿಯೊದಲ್ಲಿ ನಿವೃತ್ತಿ ವಿಷಯ ಹಂಚಿಕೊಂಡ ಇಮ್ಮೊಬೈಲ್, ಕ್ರೀಡೆಯ ಮೇಲಿನ ಪ್ರೀತಿಯಿಂದಾಗಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿತ್ತು ಎಂದಿದ್ದಾರೆ. ದೇಹಕ್ಕೆ ಶ್ರಮ ನೀಡಲು ಸಾಧ್ಯವಾಗದಿದ್ದಾಗ ಮತ್ತು ಪೂರ್ಣ ಸಾಮರ್ಥ್ಯ ನೀಡಲು ಸಾಧ್ಯವಾಗದಿದ್ದಾಗ ಪ್ರಾಮಾಣಿಕವಾಗಿ ನಿರ್ಧಾರ ತೆಗದುಕೊಳ್ಳುವುದು ಅಗತ್ಯ. ಪ್ರಸ್ತುತ ಕುಟುಂಬಕ್ಕೆ ತಮ್ಮ ಅಗತ್ಯವಿದ್ದು, ಅವರೊಂದಿಗೆ ಸಮಯ ಕಳೆಯಲು ಈ ತೀರ್ಮಾನ ತಳೆದಿರುವುದಾಗಿ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 656 ಪಂದ್ಯಗಳನ್ನು ಆಡಿರುವ ಇವರು ಒಟ್ಟು 350 ಗೋಲುಗಳನ್ನು ಬಾರಿಸಿದ್ದಾರೆ. ಲ್ಯಾಜಿಯೊ ಕ್ಲಬ್ ಪರ 2016 ರಿಂದ 2024 ರವರೆಗೆ 340 ಪಂದ್ಯಗಳಲ್ಲಿ 207 ಗೋಲು ಗಳಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ 2019-20ರ ಆವೃತ್ತಿಯಲ್ಲಿ ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇಟಲಿ ರಾಷ್ಟ್ರೀಯ ತಂಡದ ಪರ 57 ಪಂದ್ಯಗಳನ್ನಾಡಿ 17 ಗೋಲು ಬಾರಿಸಿದ್ದ ಇವರು, 2021ರಲ್ಲಿ ಯುರೋ ಕಪ್ ಗೆದ್ದ ಇಟಲಿ ತಂಡದ ಭಾಗವಾಗಿದ್ದರು. ಯುವೆಂಟಸ್, ಬೊರುಸ್ಸಿಯಾ ಡಾರ್ಟ್‌ಮಂಡ್, ಬೆಸಿಕ್ಟಾಸ್ ಸೇರಿದಂತೆ ಪ್ರಮುಖ ಕ್ಲಬ್‌ಗಳನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದ್ದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Ciro Immobile est une légende. 👑

Après 650 matchs, plus de 320 buts et de multiples trophées à son palmarès, Ciro Immobile met un terme à son immense carrière.

Un joueur exceptionnel qui aura marqué plusieurs générations. 💙 pic.twitter.com/tV4vNhQF5w

— Paris FC (@ParisFC) August 14, 2026

Merci pour tout Ciro. Tu seras toujours le bienvenue chez toi, à Paris. 💙

Thank you for everything, Ciro. Paris will always be your home. 👑 pic.twitter.com/uwByrckosG

— Paris FC (@ParisFC) August 14, 2026

La carrière exceptionnelle de Ciro Immobile. 👑

Ciro’s amazing career. A legend of this game. 🇮🇹 pic.twitter.com/j1KJsfx3dO

— Paris FC (@ParisFC) August 14, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular