HomeKarnatakaBREAKING: ಜನವರಿ ಮೊದಲ ವಾರದಲ್ಲೇ ಜಿಪಂ, ತಾಪಂ ಚುನಾವಣೆ..! ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

BREAKING: ಜನವರಿ ಮೊದಲ ವಾರದಲ್ಲೇ ಜಿಪಂ, ತಾಪಂ ಚುನಾವಣೆ..! ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜನವರಿ ಮೊದಲ ವಾರದಲ್ಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸಚಿವ ಸಂಪುಟ ಒಲವು ತೋರಿದೆ ಎಂದು ತಿಳಿದುಬಂದಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಿ, ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಚುನಾವಣೆ ದಿನಾಂಕ, ವೇಳಾಪಟ್ಟಿ ಹಾಗೂ ಇತರ ಪ್ರಕ್ರಿಯೆಗಳ ಕುರಿತು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

 ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಡಾ. ವಿಶಾಲ ಆರ್. ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ

 ಧಾರವಾಡ : : ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2026 ಕ್ಕೆ ಸಂಬಂಧಿಸಿದಂತೆ ಡಾ. ವಿಶಾಲ ಆರ್. ಭಾ.ಆ.ಸೇ ಇವರನ್ನು ಚುನಾವಣಾ ವೀಕ್ಷಕರನ್ನಾಗಿ ಭಾರತ ಚುನಾವಣಾ ಆಯೋಗವು ನೇಮಿಸಿದೆ.

 ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಹವಾಲನ್ನು ತಿಳಿಸುವುದಿದ್ದಲ್ಲಿ, ವೀಕ್ಷರ ಇ-ಮೇಲ್ [email protected] & [email protected] ರಲ್ಲಿ ಹಾಗೂ ಚುನಾವಣಾ ವೀಕ್ಷಕರ ಲೈಸನ್ ಅಧಿಕಾರಿಯಾದ ಹುಬ್ಬಳ್ಳಿಯ ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಪೋರೆಟ್ ಆಫೀಸ್‍ನ ಪ್ರಧಾನ ವ್ಯವಸ್ಥಾಪಕ ಮಹಮ್ಮದ ಕೈಝರ್ (ಮೊ.ನಂ: 9164055006) ಅವರ ಮೂಲಕ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಕೆ.ಎಮ್.ಜಾನಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅ. 08 ರಂದು ಡಾಕ್ ಅದಾಲತ್ ಆಯೋಜನ

 ಧಾರವಾಡ ಅಂಚೆ ವಿಭಾಗದ ವಿಭಾಗೀಯ ಮಟ್ಟದ ಅಕ್ಟೋಬರ್-2026 ತಿಂಗಳಿನ ಡಾಕ್ ಅದಾಲತ್‍ನ್ನು ಧಾರವಾಡ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಅಧ್ಯಕತೆಯಲ್ಲಿ ಅಕ್ಟೋಬರ್ 08, 2026 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಆಯೋಜಿಸಲಾಗಿದೆ.

 ಅಂಚೆ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ದೂರುಗಳು ವಿಶೇಷವಾಗಿ ಅಂಚೆ, ಸ್ಪೀಡ್ ಪೋಸ್ಟ್ ಪಾರ್ಸೆಲ್, ಕೌಂಟರ್ ಸೇವೆಗಳು, ಉಳಿತಾಯ ಬ್ಯಾಂಕ್, ಮನಿ ಆರ್ಡರ್ ಹಾಗೂ ದುರುಪಯೋಗ ಅಥವಾ ದುರ್ಬಳಕೆಗೆ ಸಂಬಂಧಿಸಿದ ದೂರಗಳನ್ನು ಡಾಕ್ ಅದಾಲತ್‍ನಲ್ಲಿ ಪರಿಗಣಿಸಲಾಗುವುದು.

 ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ, ಖುದ್ದಾಗಿ ಅಥವಾ ಇ-ಮೇಲ್ ಮೂಲಕ (dodharwad.kaindiapost.gov.in) ಡಾಕ್ ಅದಾಲತ್, ಹಿರಿಯ ಅಂಚೆ ಅಧೀಕ್ಷಕರ ಕಚೇರಿ., ಧಾರವಾಡ ಅಂಚೆ ವಿಭಾಗ, ಧಾರವಾಡ – 580008 ಇವರಿಗೆ ಅಕ್ಟೋಬರ್ 06, 2026 ರ ರೊಳಗಾಗಿ ಸಲ್ಲಿಸಬಹುದು.

ಸಾರ್ವಜನಿಕರ ಅನುಕೂಲಕ್ಕಾಗಿ ಡಾಕ್ ಅದಾಲತ್‍ನಲ್ಲಿ ವಿಡಿಯೋ ಕಾನ್ಘರನ್ಸ್ ಮೂಲಕ ಭಾಗವಹಿಸುವ ಸೌಲಭ್ಯವೂ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಸಮೀಪದ ಪ್ರಧಾನ ಅಂಚೆ ಕಚೇರಿಯಿಂದ (Head Post Office) VC ಮೂಲಕ ಡಾಕ್ ಅದಾಲತ್‍ನಲ್ಲಿ ಭಾಗವಹಿಸಬಹುದಾಗಿದೆ. ಡಾಕ್ ಅದಾಲತ್‍ಗೆ ಹಾಜರಾಗುವವರಿಗೆ ಯಾವುದೇ ಪ್ರಯಾಣ ಭತ್ಯೆ, ದಿನಭತ್ಯೆ ನೀಡಲಾಗುವುದಿಲ್ಲ ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular